ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ ಪಿಎಫ್ ಯೋಧನೊಬ್ಬನಿಗೆ ಹುಬ್ಬಳ್ಳಿ 1ನೇ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
11 ವರ್ಷಗಳ ಹಿಂದೆ ನಡೆದಿದ್ದ ಮೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಯೋಧ ಶಂಕ್ರಪ್ಪ ಭಜಂತ್ರಿಗೆ 24 ವರ್ಷ ಕಠಿಣ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ದಂಡ ವಿಧಿಸಿ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ್ ತೀರ್ಪು ನೀಡಿದ್ದಾರೆ.
2010ರಲ್ಲಿ ಗೀತಾ ಎಂಬುವವರನ್ನು ಮದುವೆಯಾಗಿದ್ದ ಯೋಧ ಶಂಕ್ರಪ್ಪ, ಪತ್ನಿಯೊಂದಿಗೆ ಸದಾ ಜಗಳ, ವೈಮನಸ್ಸು ಹೊಂದಿದ್ದ. ಇದರಿಂದ ಬೇಸತ್ತ ಪತ್ನಿ ತವರು ಸೇರಿದ್ದಳು. ಶಂಕ್ರಪ್ಪ ಭಜಂತ್ರಿ ವರ್ತನೆಯಿಂದಾಗಿ ಆತನಿಗೆ ಬರಬೇಕಿದ್ದ ತಾಯಿಯ ಆಸ್ತಿ ಕೂಡ ಕೈತಪ್ಪಿತ್ತು. ಇದೆಲ್ಲದರಿಂದ ಕೋಪಗೊಂಡಿದ್ದ ಶಂಕ್ರಪ್ಪ ಧ್ವೇಷ ಸಾಧಿಸಲು ಮುಂದಾಗಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ.
ಯಲ್ಲಪ್ಪ ಭಜಂತ್ರಿ (38), ಸೋಮಪ್ಪ ಭಜಂತ್ರಿ (11) ಹಾಗೂ 9 ವರ್ಷದ ಐಶ್ವರ್ಯ ಭಜಂತ್ರಿ ಎಂಬುವವರನ್ನುಹತ್ಯೆ ಮಾಡಿದ್ದ. ಪತ್ನಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯೋಧ ಶಂಕ್ರಪ್ಪ ಭಜಂತ್ರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸೇನಾಧಿಕಾರಿಗಳ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ