Latest

ಮಗನನ್ನೇ ಸುಪಾರಿಕೊಟ್ಟು ಕೊಲ್ಲಿಸಿದ ಉದ್ಯಮಿ ತಂದೆ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಖ್ಯಾತ ಉದ್ಯಮಿಯೊಬ್ಬರು ತನ್ನ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಅಖಿಲ್ ಜೈನ್(30) ಕೊಲೆಯಾದ ಮಗ ಉದ್ಯಮಿ ಭರತ್ ಜೈನ್ ತನ್ನ ಸ್ವಂತ ಮಗನನ್ನೇ ಹತ್ಯೆ ಮಾಡಿದ್ದಾರೆ. ಮಗನ ಉಪಟಳ ತಾಳಲಾರದೇ ಸ್ಥಳೀಯರಿಗೆ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಗಿ ಭರತ್ ಜೈನ್ ತಪ್ಪೊಪ್ಪಿಕೊಂಡಿದ್ದಾರೆ.

Related Articles
Home add -Advt

ಕೊಲೆ ಮಾಡಿಸಿದ್ದ ಹಂತಕ ತಂದೆ ಡಿಸೆಂಬರ್ 3ರಂದು ತನ್ನ ಮಗ ಅಖಿಲ್ ನಾಪತ್ತೆಯಾಗಿದ್ದಾನೆ ಎಂದು ಹೈಡ್ರಾಮಾ ಮಾಡಿ ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಶಂಕೆ ಹಿನ್ನೆಲೆಯಲ್ಲಿ ಭರತ್ ಜೈನ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು 48 ಗಂಟೆಗಳಲ್ಲೇ ಪ್ರಕರಣ ಭೇದಿಸಿದ್ದಾರೆ.

ಅಖಿಲ್ ಜೈನ್ ಮೃತದೇಹ ಕೇಶ್ವಾಪುರ ಬಳಿಯ ತೋಟದ ಮನೆಯಲ್ಲಿ ಪತ್ತೆಯಾಗಿದೆ. ಭರತ್ ಹೇಳಿಕೆ ಮೇರೆಗೆ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡದ ಮತ್ತೋರ್ವ ಹಿರಿಯ ನಟನಿಗೆ ಹೃದಯಾಘಾತ

https://pragati.taskdun.com/manadeep-royheart-attackhospitalized/

Related Articles

Back to top button