Latest

ಹುಬ್ಬಳ್ಳಿಯಲ್ಲಿ ಇನ್ಸ್ ಪೆಕ್ಟರ್ ಸೇರಿ 7 ಜನರಿಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೊದಲು ತಪಾಸಣೆ ಮಾಡಿದಾಗ ನೆಗೆಟಿವ್ ಬಂದಿದ್ದು, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಖಾಕಿ ಪಡೆಗೆ ಕೊರೊನಾ ಕಂಟಕ ಬೆನ್ನು ಬಿಡದೇ ಕಾಡುತ್ತಿದೆ. ಘಂಟಿಕೇರಿ ಠಾಣೆಯಲ್ಲಿ ಈಗಾಗಲೇ 6 ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟ ನಂತರ ಇದೀಗ ಇನ್ಸ್‌ಪೆಕ್ಟರ್‌ ಅವರಿಗೂ ಸೋಂಕು ಕಾಣಿಸಿಕೊಂಡಿದೆ.

ಜುಲೈ 2ರಂದು ಠಾಣೆಯ ಗೃಹರಕ್ಷಕಿಗೆ ಮೊದಲು ವೈರಸ್ ಕಾಣಿಸಿಕೊಂಡಿತ್ತು. ನಂತರ ಮಹಿಳಾ ಕಾನ್ಸ್‌ಟೇಬಲ್‌ ಸೇರಿ ಐವರು ಸಿಬ್ಬಂದಿಗೆ ಸೋಂಕು ಹರಡಿತ್ತು. ಇದೀಗ ಇನ್ಸ್‌ಪೆಕ್ಟರ್‌ ಸೇರಿ ಠಾಣೆಯ 7 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಸೋಂಕು ಕಾಣಿಸಿಕೊಂಡ ಪ್ರಥಮ ಪ್ರಕರಣವಾಗಿದೆ.

ಹುಬ್ಬಳ್ಳಿಯ ಘಂಟಿಕೇರಿ ಠಾಣೆಯ 7 ಸಿಬ್ಬಂದಿ. ಸಬರಬನ್ ಠಾಣೆಯ 6 ಸಿಬ್ಬಂದಿ, ಶಹರ, ಅಶೋಕ ನಗರ, ಬೆಂಡಿಗೇರಿ, ಟ್ರಾಫಿಕ್ ಸೇರಿದಂತೆ ವಿವಿಧ ಠಾಣೆಗಳ ಸುಮಾರು 20ಕ್ಕೂ ಹೆಚ್ಚು ಪೊಲೀಸರಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button