ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕಳೆದ ಎರಡು ತಿಂಗಳಿನಿಂದ ಸಾರಿಗೆ ನಿಗಮಗಳಲ್ಲಿ ಯಾವುದೇ ಬಸ್ ಸಂಚಾರವಿಲ್ಲದೇ ನಿಗಮದ ಆದಾಯ ಸಂಪೂರ್ಣ ಸ್ಥಗಿತಗೊಂಡು ಸಿಬ್ಬಂದಿಗಳು ಸಂಕಷ್ಟಕೀಡಾಗಿದ್ದರು. ನಿಗಮದಲ್ಲಿ ವೇತನ ನೀಡಲು ಹಣವಿಲ್ಲದಂತಹ ಸ್ಥಿತಿಯಲ್ಲಿದ್ದ ಸಾರಿಗೆ ನಿಗಮಗಳಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಸರಕಾರವು ಸಾರಿಗೆ ನಿಗಮಗಳ ಸಿಬ್ಬಂದಿಗಳ ವೇತನಕ್ಕೆ ಎಪ್ರೀಲ್ ತಿಂಗಳಲ್ಲಿ 322 ಕೋಟಿ ರೂ.ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಉಪಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಶೋಕ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ವೈ.ನಾಯಕ್ ಸನ್ಮಾನಿಸಿ, ಗೌರವಿಸಿದರು.
ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷರಾದ ವಿ.ಎಸ್.ಪಾಟೀಲ ಅವರು ಕಾಳಜಿ , ಶ್ರಮವಹಿಸಿ ಮತ್ತು ಸಂಬಂಧಪಟ್ಟವರ ಜೊತೆಗೆ ನಿರಂತರ ಮಾತುಕತೆಯಿಂದ ಎಪ್ರಿಲ್ -2020 ರ ತಿಂಗಳ ವೇತನವನ್ನು ಸರಕಾರದಿಂದ ಹಣ ಬಿಡುಗಡೆಯಾಗಿರುತ್ತದೆ . ಮುಖ್ಯ ಮಂತ್ರಿಗಳೊಡನೆ , ನಿರಂತರ ಮಾತುಕತೆ ನಡೆಸಿ , ಪರಿಸ್ಥಿತಿಯನ್ನು ವಿವರಿಸಿ , ವೇತನಕ್ಕೆ ಹಣವನ್ನು ಬಿಡುಗಡೆಗೊಳಿಸಲು ಕಾರಣರಾದ ಮಾನ್ಯ ಉಪಮುಖ್ಯ ಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, , ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ , ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ .ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ , ಈಕರಸಾಸಂ ಎಂ.ಡಿ. ಝಹೀರಾ ನಾಝಿಮ್ ಅವರಿಗೆ ನಾಲ್ಕು ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿಗಳು , ಸಿಬ್ಬಂದಿಗಳ ಪರವಾಗಿ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕೃತಜ್ಞತಾ ಪತ್ರದೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು .
ವಿಶೇಷ ರಜೆ ಕೋರಿಕೆ:
ಕಳೆದ ಮಾ.23 ರಿಂದ ಮೇ 03 ರವರೆಗೆ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಸಂಸ್ಥೆಯ ಅನುಸೂಚಿಗಳು ಕಾರ್ಯಾಚರಣೆಯಲ್ಲಿರದಿದ್ದರೂ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಈ ಅವಧಿಗೆ ಚಾಲನಾ ಸಿಬ್ಬಂದಿಗೆ ಮಾತ್ರ ವಿಶೇಷ ರಜೆ ಪರಿಗಣನೆಯಾಗಿದೆ. ಈ ಸೌಲಭ್ಯವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗೂ ವಿಸ್ತರಿಸಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ವಿಮಾ ಸೌಲಭ್ಯ ಎಲ್ಲರಿಗೂ ವಿಸ್ತರಿಸಿ:
ಕರ್ತವ್ಯದ ವೇಳೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ಕೋವಿಡ್ 19 ಪಿಡುಗಿಗೆ ತುತ್ತಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ 30 ಲಕ್ಷ ರೂ.ವಿಮೆ ನೀಡಲಾಗುವುದು ಎಂದು ಈಗಾಗಲೇ ಘೋಷಿಸಿರುತ್ತೀರಿ. ಮೆಕ್ಯಾನಿಕ್ ಗಳು ಸೇರಿದಂತೆ ಸಂಸ್ಥೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಸೌಲಭ್ಯ ವಿಸ್ತರಿಸಿ ವಿಮಾ ಮೊತ್ತವನ್ನು 30 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ ಹೆಚ್ಚಿಸಲು ಕೋರಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ,ಪ್ರಸಾದ ಅಬ್ಬಯ್ಯ ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳಾದ ಕಿರಣಕುಮಾರ ಬಸಾಪುರ,ವೈ.ಎಂ.ಶಿವರಡ್ಡಿ, ಎಫ್.ಸಿ.ಹಿರೇಮಠ, ವಿವೇಕಾನಂದ ವಿಶ್ವಜ್ಞ, ಬಸವಲಿಂಗಪ್ಪ ಬೀಡಿ,ಸಂತೋಷಕುಮಾರ,ನಿತಿನ್ ಹೆಗಡೆ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ