ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಭದ್ರತಾ ವೈಫಲ್ಯವುಂಟಾಗಿದೆ. ರೋಡ್ ಶೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ಗಳನ್ನು ಹಾರಿ ಪ್ರಧಾನಿಯತ್ತ ಧಾವಿಸಿ ಬಂದ ಘಟನೆ ನಡೆದಿದೆ.
26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದು, ಹುಬ್ಬಳ್ಳಿಯ ಏರ್ ಪೋರ್ಟ್ ನಿಂದ ರೈಲ್ವೆ ಮೈದಾನದವರೆಗೆ ಸುಮಾರು 8 ಕೀ.ಮೀ ವರೆ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ರೋಡ್ ಶೋ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸಾಗರದತ್ತ ಪ್ರಧಾನಿ ಕೈಬೀಸಿ ಸಾಗಿದರು. ಈ ವೇಳೆ ಬ್ಯಾರಿಕೆಡ್ ಗಳನ್ನು ಹಾರಿ ಯುವಕನೊಬ್ಬ ಕೈಯಲಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಧಾವಿಸಿ ಬಂದಿದ್ದಾನೆ.
ಪ್ರಧಾನಿ ಮೋದಿಯವರಿಗೆ ಸ್ವತ: ಹಾರ ಹಾಕುವ ನಿಟ್ಟಿನಲ್ಲಿ ಮೋದಿ ಕಾರಿನತ್ತ ಬಂದು ಪ್ರಧಾನಿಯವರಿಗೆ ಹಾರ ಹಾಕಲು ಯತ್ನಿಸಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಕೂಡಲೇ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರ ರೋಡ್ ಶೋ ವೇಳೆ ಭದ್ರತಾ ಲೋಪವುಂಟಾದ ಘಟನೆ ನಡೆದಿದೆ.
ನೇರ ಪ್ರಸಾರ –https://fb.watch/h-EnPbn5st/?mibextid=RUbZ1f
*ಹುಬ್ಬಳ್ಳಿಗೆ ಆಗಮಿಸಿದ ಮೋದಿ; ಮಾರ್ಗ ಮಧ್ಯೆ ಕಾರಿನಿಂದ ಇಳಿದು ಜನರತ್ತ ಕೈಬೀಸಿದ ಪ್ರಧಾನಿ*
https://pragati.taskdun.com/hubli26th-national-youth-festivalpm-modientry/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ