*ಇನ್ಸ್ ಪೆಕ್ಟರ್ ನಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಪತ್ರದ ಮೂಲಕ ಸಿಎಂ, ಗೃಹ ಸಚಿವರಿಗೆ ದೂರು*
ಪ್ರಗತಿವಾಹಿನಿ ಸುದ್ದಿ: ರಕ್ಷಕರೇ ಭಕ್ಷಕರಾದ ಕಥೆಯಿದೆ. ಪೊಲೀಸ್ ಇನ್ಸ್ ಪೆಕ್ಟರ್ ಓರ್ವ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ನೊಂದ ಸಿಬ್ಬಂದಿಗಳು ದೂರು ನೀಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಯಳ್ಳೂರು ವಿರುದ್ಧ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾತ್ರಿಯಾದರೆ ಇನ್ಸ್ ಪೆಕ್ಟರ್ ಸುರೇಶ್, ಮಹಿಳಾ ಸಿಬಂದಿಗಳಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನಂತೆ ಅಶ್ಲೀಲವಾಗಿ ಮಾತನಾಡುತ್ತಾನಂತೆ. ಮಹಿಳಾ ಸಿಬ್ಬಂದಿಗಳು ರಜೆ ಕೇಳಲು ಹೋದರೆ ಅವರ ಸೌಂದರ್ಯದ ಬಗ್ಗೆ ಮತನಾಡುತ್ತಾನಂತೆ. ಅಸಭ್ಯವಾಗಿ ಪದ ಬಳಕೆ ಮಾಡುತ್ತಾನಂತೆ. ಇನ್ಸ್ ಪೆಕ್ಟರ್ ಕಾಟಕ್ಕೆ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಮಹಿಳಾ ಸಿಬ್ಬಂದಿಗಳು ಆರೋಪಿಸಿದ್ದಾರೆ.
ಅಲ್ಲದೇ ಸುದೀರ್ಘ ಪತ್ರ ಬರೆದಿರುವ ಮಹಿಳಾ ಸಿಬ್ಬಂದಿಗಳು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇನ್ಸ್ ಪೆಕ್ಟರ್ ಸುರೇಶ್ ನಿಂದ ನಮಗೆ ಮುಕ್ತಿಕೊಡಿ ಎಂದು ಮಹಿಳಾ ಆಯೋಗ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್ ಹಾಗೂ ಡಿಜಿ ಹಾಗೂ ಐಜಿಪಿ ಅವರಿಗೂ ಪತ್ರದ ಮೂಲಕ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ