Latest

ಅನುಮಾನ ತಂದ ಆಪತ್ತು; ಪತ್ನಿಯನ್ನೇ ಕೊಂದ ಪತಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಪತ್ನಿಯ ಮೇಲಿನ ಅನುಮಾನಕ್ಕೆ ಪತಿ ಮಹಾಶಯನೋರ್ವ ಆಕೆಯನ್ನು ಹತ್ಯೆಗೈದು ಬಳಿಕ ನೇಣುಹಾಕಿ ಆತ್ಮಹತ್ಯೆ ಎಂದು ಬಿಂಬಿಸಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ನಡೆದಿದೆ.

ಆರೋಪಿಯನ್ನು ಮಹದೇವಪ್ಪ ಎಂದು ಗುರುತಿಸಲಾಗಿದೆ. ಕಾರು ಚಾಲಕನಾಗಿದ್ದ ಮಹದೇವಪ್ಪ, ಕೋಲ್ಕತ್ತಾ ಮೂಲದ ವಿಚ್ಛೇದಿತ ಮಹಿಳೆಯನ್ನು ವಿವಾಹವಾಗಿದ್ದ.

ವಿವಾಹದ ಬಳಿಕ ತನ್ನ ಪತ್ನಿಯನ್ನು ಸಂಶಯದಿಂದ ನೋಡುತ್ತಿದ್ದ. ಇದೇ ಕಾರಣಕ್ಕಾಗಿ ಇಂದು ಬೆಳಿಗ್ಗೆ ಪತ್ನಿಯನ್ನು ಹತ್ಯೆಗೈದು ಬಳಿಕ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾನೆ.

ಮಹದೇವಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ವಿಚಾರಣೆಯ ವೇಳೆ ತಾನೇ ಪತ್ನಿಯನ್ನು ಕೊಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

Home add -Advt

Related Articles

Back to top button