Kannada NewsLatest

ಬೆಳಗಾವಿ ಬಳಿ ಭಾರಿ ಪ್ರಮಾಣದ ಮದ್ಯ ವಶ: ಚುನಾವಣೆ ಹಿನ್ನೆಲೆಯಲ್ಲಿ ಸಂಗ್ರಹ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಗ್ರಹಿಸಲು ತರಲಾಗುತ್ತಿತ್ತೆನ್ನುವ ಸುಮಾರು 68 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಬೆಳಗಾವಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಬೆಳಗಾವಿ, ಪಿರೋಜ್ ಖಾನ್ ಖಿಲ್ಲೇದಾರ, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗರವರ ಆದೇಶದಂತೆ, ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.

ಮುಂಬರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾನಾಪೂರ ವಲಯ ವ್ಯಾಪ್ತಿಯ ಜಾಂಬೋಟಿ-ಖಾನಾಪೂರ ಎಸ್.ಎಚ್-31 ರಸ್ತೆಯ ಮೋದೆಕೊಪ್ಪ ಕ್ರಾಸ್ ಹತ್ತಿರ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಮದ್ಯಾಹ್ನ ಗಂಟೆಗೆ ಅಬಕಾರಿ ನಿರೀಕ್ಷಕರಾದ ದಾವಲಸಾಬ ಶಿಂದೋಗಿ, ಅಬಕಾರಿ ಉಪ ನಿರೀಕ್ಷಕರಾದ ಜಯರಾಮ ಜಿ. ಹೆಗಡೆ ಮತ್ತು ಸಿಬ್ಬಂದಿಯವರಾದ ಮಂಜುನಾಥ ಬಳಗಪ್ಪನವರ, ಪ್ರಕಾಶ ಡೋಣಿ ಕಾರ್ಯಾಚರಣೆ ನಡೆಸಿದರು.

ಒಂದು ಕಂದು ಬಣ್ಣದ ಭಾರತ ಬೆಂಜ್ ಗೂಡ್ಸ ಕ್ಯಾರಿಯರ್ 12 ಚಕ್ರದ ಕಂಟೆನರ್ (ವಾಹನ ಸಂಖ್ಯೆ: ಜಿಜೆ-10/ಟಿಟಿ-8276)ನಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 180ಎಮ್.ಎಲ್. ಅಳತೆಯ 21696 ಇಂಪಿರಿಯಲ್ ಬ್ಲ್ಯೂ ವಿಸ್ಕಿ ಬಾಟಲಿಗಳನ್ನು (ಒಟ್ಟು 3905.28 ಲೀ. ಗೋವಾ ಮದ್ಯ) ಸಾಗಾಟ ಮಾಡುತ್ತಿದ್ದಾಗ ದಾವಲಸಾಬ ಶಿಂದೋಗಿ, ಅಬಕಾರಿ ನಿರೀಕ್ಷಕರು, ಖಾನಾಪೂರ ವಲಯರವರು ಜಪ್ತು ಮಾಡಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಜಪ್ತಾದ ಮಾಲಿನ ಒಟ್ಟು ಅಂದಾಜು ಮೌಲ್ಯ ರೂ. 67,73,120.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button