
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಆಟೋನಗರದ ಟಾಟಾ ಪವರ್ ಪ್ಲಾಂಟ್ ಬಳಿ ಅಫೀಮು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಜೋಧಪುರ ಮೂಲದ ಹಾಲಿ ಎಂಕೆ ಹುಬ್ಬಳ್ಳಿಯ ನಿವಾಸಿಗಳಾದ ರೋಹಿತಾಶ್ವ ಬಿಷ್ಣೋಯಿ (೨೪), ಹಾಗೂ ರಾಜಕುಮಾರ ಬಿಷ್ಣೋಯಿ (೨೪) ಬಂಧಿತ ಆರೋಪಿಗಳು. ಆರೋಪಿಗಳಿಂದ ಒಟ್ಟು ೨.೭೦ ಲಕ್ಷ ರೂ. ಮೌಲ್ಯದ ೩೧೫ ಗ್ರಾಂ ಅಫೀಮು, ೨ ಮೊಬೈಲ್‌ಗಳು, ಸ್ವಿಪ್ಟ್ ಕಾರ್ ಮತ್ತು ೩೦೦೦ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘
ಸಿಸಿಬಿ ಘಟಕದ ಪಿಐ ನಿಂಗನಗೌಡರ್ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಭಾರತದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
https://pragati.taskdun.com/politics/basavaraj-bommaireactionpfi/
https://pragati.taskdun.com/latest/pm-modikarnataka-visitnovember-11th/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ