*ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸ್ವಾತಂತ್ರ್ಯ ಹೋರಾಟಗಾರ, ಸಹಕಾರಿ ನಾಯಕ ದಿ. ಅಪ್ಪಣಗೌಡ ಪಾಟೀಲ್ ಅವರ ದೂರದೃಷ್ಟಿ ಪರಿಣಾಮವಾಗಿ ಆರಂಭವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು, ರೈತರ ಹಾಗೂ ಸಾಮಾನ್ಯರ ಬೆಳವಣಿಗೆಗಾಗಿ ಸದಾ ಶ್ರಮಿಸಿರುವ ಸಂಸ್ಥೆಯಾಗಿದೆ. ಹೀಗಾಗಿ ಈ ಸಂಸ್ಥೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದ ಸಂಕೇಶ್ವರ ರಸ್ತೆಯಲ್ಲಿರುವ ನೇಸರಿ ಗಾರ್ಡನ್ ನಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 2025 ರ ಚುನಾವಣೆಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದಿವಂಗತ ಅಪ್ಪಣಗೌಡ ಪಾಟೀಲ್ ಅವರು ಸಾಮಾನ್ಯ ಜನರ ಅನುಕೂಲಕ್ಕಾಗಿ ಸ್ಥಾಪಿಸಿದ ಸಂಸ್ಥೆಗಳು ಇಂದು ನಾಶವಾಗಿವೆ. ನಾವು ಅವುಗಳಿಗೆ ಶಕ್ತಿ ತುಂಬಲು ಪ್ರಯತ್ನಿಸುತ್ತಿದ್ದೇವೆ. ಸಂಸ್ಥೆಗಳನ್ನು ಉಳಿಸುವವರು ಮತ್ತು ಸಂಸ್ಥೆಗಳನ್ನು ಮುಳುಗಿಸುವವರ ನಡುವಿನ ವ್ಯತ್ಯಾಸವನ್ನು ಸಾರ್ವಜನಿಕರು ಗಮನಿಸಬೇಕೆಂದು ಹೇಳಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 2025 ರ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದಲೇ ಪ್ರಚಾರ ಪ್ರಾರಂಭಿಸಿ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ಈ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ವಾತಂತ್ರ್ಯ ಹೋರಾಟಗಾರ, ಸಹಕಾರಿ ನಾಯಕ ದಿ. ಅಪ್ಪಣಗೌಡ ಪಾಟೀಲ್ ಅವರ ಪುಸ್ತಕವನ್ನು ಬಿಡುಗಡೆಗೊಳಿಸಿ, ದಿ. ಅಪ್ಪಣಗೌಡ ಪಾಟೀಲ್ ಅವರು ಹುಕ್ಕೇರಿಗೆ ನೀಡಿದ ಕೊಡುಗೆ ಬಗ್ಗೆ ಮನೆ ಮನೆಗೂ ತಿಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಮುಖಂಡರಾದ ಸಂತೋಷ ಮುಡಸಿ, ವಿಜಯ ರವದಿ, ಬಿ.ಕೆ. ಮಟಗಾರ, ಜಯಗೌಡ ಪಾಟೀಲ್, ರೀಷಬ್ ಪಾಟೀಲ್, ಸುರೇಶ ಪುಣಶಾಳಿ, ಗುರು ಪಾಟೀಲ್, ಪ್ರಕಾಶ ಪಾಟೀಲ್, ಅಶೋಕ ಅಂಕಲಗಿ, ಪ್ರಕಾಶ ಮೈಶಾಳೆ, ರೇಖಾ ದ್ಯಾಮಗೋಳ, ಸುಜಾತಾ ಬೆಟಗೇರಿ, ಭಾರತಿ ಬೆಣ್ಣಿ, ಬಸನಗೌಡ ಪಾಟೀಲ್, ವಿಕ್ರಮ ಕರನಿಂಗ, ಶಿವಶಂಕರ ಚೌಗಲೆ, ರಾಜು ಗವಡೆ, ದಿಲೀಪ್ ಹೊಸ್ಮನಿ, ಮಹೇಶ್ ಹಟ್ಟಿಹೊಳಿ, ವೀರುಪಾಕ್ಷಿ ಮರೆಣ್ಣವರ್, ಮಲ್ಲಿಕಾರ್ಜುನ ರಾಸಿಂಗೆ, ಕಿರಣ್ ರಜಪೂತ್, ಬಸನಗೌಡ ಪಾಟೀಲ್, ಶಂಕರ್ ಹೆಗ್ಡೆ, ಡಾ. ಜಯಪ್ರಕಾಶ್ ಕರಜಗಿ, ಅವಿನಾಶ್ ನಲವಾಡೆ, ಪ್ರವೀಣ್ ನೇಸ್ರಿ, ವಿನೋದ್ ನಾಯಕ್, ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.