Latest

*ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ತುಮಕೂರು: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರಿತ್ತಿದ್ದು, ಪಕ್ಷೇರ ಅಭ್ಯರ್ಥಿಯೋರ್ವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ತುರುವೆಕೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣ ಅಲಿಯಾಸ್ ಕರಿಯಾನನ್ನು ಕೊಲೆ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ.

Home add -Advt

ಲಗ್ಗೆರೆಯಲ್ಲಿ ಕೊಡವತ್ತಿ ಮೂಲದ ಭೂಮಿಕಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಚೇತನ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ನಾರಾಯಣ ಎ6 ಆರೋಪಿಯಾಗಿದ್ದ. ಭೂಮಿಕಾ ಸಹೋದರ ಮತ್ತು ಇತರರು ಸೇರಿ ಚೇತನ್ ನನ್ನು 2021ರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

https://pragati.taskdun.com/c-t-ravireactioncm-postlingayita-dam/


Related Articles

Back to top button