Belagavi NewsBelgaum NewsKarnataka News

*ಗುರುಪೌರ್ಣಿಮೆ ಷಟಸ್ಥಲ ಪ್ರಭೋದಕ, ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ರಾಯಬಾಗ: ನಗರದ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶಾಖಾ ಮಠದಲ್ಲಿ ಗುರುಪೌರ್ಣಿಮೆಯ ನಿಮಿತ್ಯ ಇಂದು ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಪೂಜೆಯನ್ನು ಅರುಣ ಐಹೊಳೆ ದಂಪತಿಗಳು ನೆರವೇರಿಸಿ ಗುರು ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಇಲಕಲ್ ನ ಶ್ರೀ ಅನ್ನದಾನೇಶ್ವರ ಶಿವಲಿಂಗ ಶಾಸ್ತ್ರಿಗಳಿಗೆ “ಷಟಸ್ಥಲ ಪ್ರಭೋದಕ” ಪ್ರಶಸ್ತಿಯನ್ನು ಕಪರಟ್ಟಿ-ಕಳ್ಳಿಗುದ್ದಿ ಹಿರೇಮಠದ ಶ್ರೀ ಬಸವರಾಜ ಸ್ವಾಮಿಗಳಿಗೆ “ಬ್ರಹ್ಮಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕರಾದ ಶ್ರೀ ಡಿ ಎಂ ಐಹೋಳೆ, ಹುಕ್ಕೇರಿ ಹಿರೇಮಠ ಎಂದರೆ ಇಡೀ ದೇಶದ ತುಂಬಾ ಹೆಸರು ಮಾಡಿದೆ. ನಮ್ಮೂರಲ್ಲಿಯೂ ಕೂಡ ಹುಕ್ಕೇರಿ ಹಿರೇಮಠದ ಶಾಖೆ ಇದೆ ಎನ್ನುವುದೇ ನಮಗೆ ಹೆಮ್ಮೆ. ಇಲ್ಲಿ ಎಲ್ಲರನ್ನೂ ಕೂಡ ಸಮದೃಷ್ಟಿಯಿಂದ ನೋಡುವ ಅಪರೂಪದ ಗುರುಗಳು ನಮಗೆ ಸಿಕ್ಕಿದ್ದಾರೆ. ಗುರುಪೌರ್ಣಿಮೆ ಎಂದರೆ ಗುರುವನ್ನು ಗೌರವಿಸಿ ಗುರುವಿನ ಆಶೀರ್ವಾದವನ್ನು ಪಡೆಯುವುದು ಎಂದರ್ಥ.

Home add -Advt

ಷಟಸ್ಥಲ ಪ್ರಭೋದಕ ಪ್ರಶಸ್ತಿಯನ್ನು ಪಡೆದ ಶ್ರೀ ಅನ್ನದಾನೇಶ್ವರ ಶಿವಲಿಂಗ ಶಾಸ್ತ್ರಿಗಳು ಮಾತನಾಡಿ, ಶ್ರೀಮಠದಿಂದ ನಮಗೆ ಷಟಸ್ಥಲ ಪ್ರಭೋದಕ ಪ್ರಶಸ್ತಿಯನ್ನು ಗುರುಗಳು ಅನುಗ್ರಹಿಸಿದ್ದಾರೆ. ನಾವು ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಅಷ್ಟೇ ಅಲ್ಲ, ಅದನ್ನು ಅರಿತು ಆಚರಿಸಿ ಷಟಸ್ಥಲಗಳ ತತ್ವವನ್ನು ಬದುಕಿನಲ್ಲಿ ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ನಾನು ಖಂಡಿತ ಮಾಡುತ್ತೇನೆ ಎಂದರು.

ಬ್ರಹ್ಮಶ್ರೀ ಪ್ರಶಸ್ತಿಯನ್ನು ಪಡೆದ ಕಪರಟ್ಟಿ-ಕಳ್ಳಿಗುದ್ದಿ ಹಿರೇಮಠದ ಶ್ರೀ ಬಸವರಾಜ್ ಸ್ವಾಮಿಗಳು ಮಾತನಾಡಿ, ಬ್ರಹ್ಮಶ್ರೀ ಪ್ರಶಸ್ತಿಯನ್ನು ಅನುಗ್ರಹಿಸಿದ್ದಾರೆ. ಅದರಂತೆ ನಾವು ನಡೆದುಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತೇವೆ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಗುರುಪೌರ್ಣಿಮೆ ಎಂದರೆ ಬೇರೆ ಬೇರೆ ಕಡೆಗೆ ಹೋಗಿ ಬರುವುದಷ್ಟೇ ಅಲ್ಲ, ನಮ್ಮಲ್ಲಿರುವ ಮಠಗಳಲ್ಲಿ ಕೂಡ ಹೋಗಿ ಗುರುಗಳನ್ನು ಗೌರವಿಸಬೇಕು ಎಂದರು.

ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರೀ ಗಳು ವೇದಘೋಷ ಮಾಡಿದರು. ರಾಯಭಾಗ ಹಿರೇಮಠದ ಪ್ರದಾನ ಅರ್ಚಕ ನಿಂಗಯ್ಯ ಸ್ವಾಮಿ ಸ್ವಾಗತಿಸಿದರು. ಇದೆ ಸಂದರ್ಭದಲ್ಲಿ ನಿಶಾಂತ ಸ್ವಾಮಿ, ಉದಯಕುಮಾರ್ ಶಾಸ್ತ್ರೀಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಪೂಜೇರಿ ಸರ್ ನಿರೂಪಿಸಿದರು. ಸದಾಶಿವ ಘೋರ್ಪಡೆ, ಸದಾನಂದ ಹಾಳಿoಗಳಿ, ಅರುಣ ಐಹೊಳೆ, ವಿವೇಕ್ ಯಮಕನಮರಡಿ, ಎಸ್ ಎಸ್ ಕಾಂಬಳೆ, ಡಾ. ಗಾಯತ್ರಿ ಎಸ್ ಬಾನೆ, ಶ್ರೀಮತಿ ಸುಶೀಲಾ ಡಿ ಐಹೊಳೆ, ಮಹೇಶ್ ಕರಮಡಿ, ಭಾರತಿ ಲೋಹಾರ, ಎಸ್ ಎಸ್ ಅಮರಶೆಟ್ಟಿ, ಸಂಜು ಮೈಶಾಳಿ, ಅಶೋಕ್ ದೇಶಿoಗೆ ಹಾಗೂ ಹುಕ್ಕೇರಿ ಹಿರೇಮಠದ ಸದ್ಭಕ್ತರು ಉಪಸ್ಥಿತರಿದ್ದರು.

Related Articles

Back to top button