ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಮುಖಪುಟ(Facebook)ದಲ್ಲಿ ಆನ್-ಲೈನ್ ಕವಿಗೋಷ್ಠಿಯನ್ನು ಮೇ 23ರಂದು ಸಾಯಂಕಾಲ 6:00 ರಿಂದ 8:00 ಗಂಟೆಗೆಯವರಿಗೆ Facebookನ ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ತಾಲೂಕು ಘಟಕದ ಗುಂಪಿನಲ್ಲಿ ನೇರ (ಲೈವ್) ಪ್ರಸಾರದ ಮೂಲಕ ಜರುಗಿಸಲಾಗುವುದು ಆಸಕ್ತ ಕವಿಗಳು ಭಾಗವಹಿಸುವಂತೆ ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ತಿಳಿಸಿದ್ದಾರೆ.
*ಭಾಗವಹಿಸುವ ಕವಿಗಳಲ್ಲಿ ಬಿನ್ನಹ*
೧. ಕವಿಗೋಷ್ಠಿಯಲ್ಲಿ ಕೊರೋನಾಕ್ಕೆ ಸಂಬಂಧಿಸಿದ ಕವನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕವನಗಳನ್ನು ವಾಚಿಸಬಹುದು.
೨. ಕವಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲೆಯ ಕವಿಗಳು ಮಾತ್ರ ಭಾಗವಹಿಸುವುದು.
೩ ಸ್ವರಚಿತ ಕವನವಿರಬೇಕು. ಕವನವಾಚನದ ವಿಡಿಯೋ ಮಾಡುವಾಗ ಮೊಬೈಲ್ ನ್ನು ಅಡ್ಡಲಾಗಿ ಹಿಡಿಯಿರಿ.
೪. ಕವಿಗಳು ೨ ನಿಮಿಷದ ಒಳಗಾಗಿ ಕವನವನ್ನು ವಾಚಿಸುವ ವಿಡಿಯೋ ಮಾಡಿ ಕಳುಹಿಸಬೇಕು. ನಿಗದಿತ ಅವಧಿಗಿಂತ ಹೆಚ್ಚಾದರೆ ಸ್ವೀಕರಿಸಲಾಗುವುದಿಲ್ಲ.
೫. ತಮ್ಮ ಹೆಸರು ಹೇಳಿ ನೇರವಾಗಿ ಒಂದು ಕವನವನ್ನು ಮಾತ್ರ ವಾಚಿಸಿ ಕಳುಹಿಸುವುದು. ವಿವರಣೆ ಬೇಡ.
೬. ಭಾಗವಹಿಸುವ ಕವಿಗಳು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ, ಕವನವನ್ನು ವಾಚಿಸುವ ವಿಡಿಯೋವನ್ನು 96066 97433 & 9844629084 ಈ ವಾಟ್ಸಪ್ ಸಂಖ್ಯೆಗಳಿಗೆ ದಿನಾಂಕ : ೨೧.೫.೨೦೨೦ರಂದು ಸಾಯಂಕಾಲ ೭.00 ಗಂಟೆಯೊಳಗೆ ಕಳುಹಿಸಬೇಕು.
೭. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊ.ಸಂ.ಗೆ ಕರೆ ಮಾಡಿ.
ಪ್ರಕಾಶ ದೇಶಪಾಂಡೆ (96066 97433)
ಅಧ್ಯಕ್ಷರು, ಕಸಾಪ ಹುಕ್ಕೇರಿ ತಾಲೂಕು.
ಶಿವಾನಂದ ಗುಂಡಾಳಿ (9844629084)
ಗೌ.ಕಾರ್ಯದರ್ಶಿ ಕಸಾಪ ಹುಕ್ಕೇರಿ ತಾಲೂಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ