Kannada NewsKarnataka NewsLatest

ಹುರಕಡ್ಲಿ ಅಜ್ಜನವರು ಮನುಕುಲದ ಚಿಂತಕರಾಗಿದ್ದರು – ಚನ್ನರಾಜ ಹಟ್ಟಿಹೊಳಿ

 ಪ್ರಗತಿವಾಹಿನಿ ಸುದ್ದಿ, ​ನವಲಗುಂದ : ​  ಹುರಕಡ್ಲಿ ಅಜ್ಜನವರು ಮನುಕುಲದ ಚಿಂತಕರಾಗಿದ್ದರು​. ಈಗಲೂ ಕೂಡ ಅಜ್ಜನವರು ಕಣ್ಣಿಗೆ ಕಾಣದಿದ್ದರೂ ಕಷ್ಟವೆಂದು ಬಂದವರಿಗೆ ಪರಿಹಾರ ನೀಡುವ ದೈವಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ನವಲಗುಂದದ ಸುಕ್ಷೇತ್ರ ಶ್ರೀ ಹುರಕಡ್ಲಿ ಅಜ್ಜ ಕಲ್ಯಾಣ ಕೇಂದ್ರದ ಎಸ್‌. ಎಸ್. ಬಾಗಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು. ಹುರಕಡ್ಲಿ ಅಜ್ಜನವರು ಒಬ್ಬ ಮಹಾನ್ ಪುರುಷನಾಗಿ​,​ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಹಿಂದೂ ಧರ್ಮವನ್ನು ಬೆಳೆಸುವುದರಲ್ಲಿ​  ಮಹತ್ತರ​ ಪಾತ್ರ ವಹಿಸಿದ್ದರು.​ ಹುರಕಡ್ಲಿ ಅಜ್ಜನವರ ಆಶೀರ್ವಾದ​ದಿಂದ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ​ ಎಂದು ಅವರು ಹೇಳಿದರು​.
ಸಮಾರಂಭದ ಸಾನಿಧ್ಯವನ್ನು ಹೊಸಳ್ಳಿಯ ಸಂಸ್ಥಾನಮಠದ ಶ್ರೀ ಮ. ನಿ. ಪ್ರ ಜಗದ್ಗುರು ಅಭಿನವ ಬೂದಿ ಮಹಾಸ್ವಾಮಿಗಳು ವಹಿಸಿದ್ದರು.
​ ಈ ಸಮಯದಲ್ಲಿ ವಿಧಾನ ಪರಿಷತ್ ಸಭಾಪತಿ​ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ ಮತ್ತು ಸಕ್ಕರೆ ಖಾತೆ ಸಚಿವರಾದ ​ ಶಂಕರ ಬ ಪಾಟೀಲ ಮುನೇನಕೊಪ್ಪ, ​ಚನ್ನರಾಜ ಹಟ್ಟಿಹೊಳಿ ಅವರ ತಾಯಿ​ ಗಿರಿಜಾ ಹಟ್ಟಿಹೊಳಿ ಹಾಗೂ ಶ್ರೀ ಹುರಕಡ್ಲಿ ಅಜ್ಜ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ​ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button