
ಪ್ರಗತಿವಾಹಿನಿ ಸುದ್ದಿ: ಪತ್ನಿ ಕೋರ್ಟ್ ಗೆ ಬಂದು ಸಾಕ್ಷಿ ಹೇಳ್ತಾಳೆ ಎಂದು ಪತಿಮಹಾಶಯನೊಬ್ಬ ಪತ್ನಿಯನ್ನೇ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಇಲ್ಲಿನ ಮಾದನಾಯನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಕಲಹದ ವಿಚಾರವಾಗಿ ಪತ್ನಿ ಕೋರ್ಟ್ ಗೆ ಬಂದು ಸಾಕ್ಷಿ ಹೇಳುತ್ತಾಳೆ ಎಂದು ಪತ್ನಿಗೆ ಪತಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಮುನಾ ಪತಿಯಿಂದ ಚಾಕು ಇರಿತಕ್ಕೊಳಗಾದ ಪತ್ನಿ. ಗುರುಮೂರ್ತಿ ಪತ್ನಿ ಹತ್ಯೆಗೆ ಯತ್ನಿಸಿದ ಪತಿ. ಮೂರು ದಿನಗಳ ಹಿಂದೆ ಪತ್ನಿ ಜಮುನಾ ಕಾಲು ಚೈನ್ ಖರೀದಿಸಲೆಂದು ಪತ್ನಿ ಅಂಗಡಿಗೆ ಬಂದಿದ್ದಳು. ಆಕೆಯನ್ನು ಹಿಂಬಾಅಲಿಸಿಕೊಂಡು ಬಂದ ಪತಿ ಗುರುಮುರ್ತಿ, ಕೋರ್ಟ್ ಗೆ ಬರಬಾರದು ಎಂದು ಹೇಳಿ ಏಕಾಏಕಿ ಚಾಕು ಇರಿದು ಪರಾರಿಯಾಗಿದ್ದಾನೆ.
ಪತ್ನಿ ಜಮುನಾಳ ಕುತ್ತಿಗೆ ಕೈ ಭಾಗಕ್ಕೆ ಚಾಕುವಿನಿಂಣ್ದ ಇರಿಯಲಾಗಿದೆ. ಈ ಹಿಂದೆಯೂ ಪತ್ನಿಗೆ ಚಾಕು ಇರಿದಿದ್ದ ಗುರುಮೂರ್ತಿ. ಕುಡಿತದ ಚಟ, ಪತ್ನಿಗೆ ಹಿಂಸೆ, ಕಿರುಕುಳ ನೀಡುತ್ತೊದ್ದ ಪತಿ ಗುರುಮೂರ್ತಿ ಕಾಟಕ್ಕೆ ಬೇಸತ್ತು 11 ವರ್ಷದಿಂದ ಜಮುನಾ ಬೇರೆ ವಾಸವಾಗಿದ್ದರು. ಆದಾಗ್ಯೂ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಪತಿಯ ವಿರುದ್ಧ ಜಮುನಾ ಕೋರ್ಟ್ ಮೆಟ್ಟಿಲೇರಿದ್ದಳು. ಇದೀಗ ರ್ಟ್ ಗೆ ಸಾಕ್ಷಿ ಹೇಳಲು ಬರಬಾರದು ಎಂದು ಪತ್ನಿ ಕೊಲೆಗೆ ಪ್ಲಾನ್ ಮಾಡಿ ಪತಿ ಚಾಕು ಇರಿದಿದ್ದಾನೆ.
ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.