ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕೌಟುಂಬಿಕ ಕಲಹದಿಂದಾಗಿ ಬೇರ್ಪಟ್ಟಿದ್ದ ಸತಿ-ಪತಿಯನ್ನು ನ್ಯಾಯಾಲಯ ಒಂದು ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದಿದೆ.
ಚಿಕ್ಕೋಡಿ ಹಿರಿಯ ದಿವಾಣಿ ನ್ಯಾಯಾಲಯವು ನ್ಯಾಯವಾದಿಗಳ ಸಮ್ಮುಖದಲ್ಲಿ ಕಳೆದ ಮೂರು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಪತಿ-ಪತ್ನಿಯನ್ನು ಸಂಧಾನ ಮಾಡುವ ಮೂಲಕ ಇಬ್ಬರನ್ನು ಒಂದು ಮಾಡಿದೆ.
ಪಟ್ಟಣ ರಾಮನಗರದ ನಿವಾಸಿಗಳಾದ ಸತೀಶ ಕೋಮಾರಿ ಹಾಗೂ ಪಾರ್ವತಿ ಸತೀಶ ಕೋಮಾರಿ ಅವರು ಕಳೆದ ಮೂರು ವರ್ಷಗಳಿಂದ ಕೌಟುಂಬಿಕ ಕಲಹದ ಹಿನ್ನಲೇಯಲ್ಲಿ ದೂರಾಗಿದ್ದರು. ಈ ಕುರಿತು ಪತ್ನಿ ಪಾರ್ವತಿ ಕಳೆದ ಒಂದು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಚಿಕ್ಕೋಡಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಶ್ರೀಕಾಂತ ಅವರ ಸಮ್ಮುಖದಲ್ಲಿ ಪತಿ-ಪತ್ನಿ ಕರೆದು ನ್ಯಾಯವಾದಿಗಳ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿ ಬೇರೆಯಾಗಿದ್ದ ಸತಿ-ಪತಿಯನ್ನು ಒಂದು ಮಾಡಿ ಆದೇಶ ಮಾಡಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ಸಾರ್ವಜನಿಕರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಅರ್ಜಿದಾರ ಪಾರ್ವತಿ ಕೋಮಾರಿ ಪರವಾಗಿ ರವಿ ಹುದ್ದಾರ ಹಾಗೂ ಸತೀಶ ಕೋಮಾರಿ ಅವರ ಪರವಾಗಿ ನ್ಯಾಯವಾದಿ ಮಿಥುನ ಕಾಂಬಳೆ ಅವರು ಅರ್ಜಿ ಸಲ್ಲಿಸಿ ರಾಜಿ ಸಂಧಾನ ಮಾಡಿದ್ದರು. ಸರಕಾರಿ ಅಪರ ಅಭಿಯೋಜಕರಾದ ಆರ್.ಐ.ಖೋತ,ನ್ಯಾಯವಾದಿ ಡಾ.ಎಂ.ಎಸ್.ಕಬಾಡಗಿ ಮಧ್ಯಸ್ತಿಕೆ ವಹಿಸಿದ್ದರು.
ಬೆಳಗಾವಿ ಗಡಿವಿವಾದ; ನಮ್ಮ ಊರು, ಹಳ್ಳಿ ನಮ್ಮದು; ಬಿಜೆಪಿ ರಾಜಕೀಯ ಬಿಟ್ಟು ಯೋಚಿಸಲಿ ಎಂದ ಡಿ.ಕೆ.ಶಿವಕುಮಾರ್
https://pragati.taskdun.com/d-k-shivakumarreactionbelagavi-border-issue/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ