Latest

*ಪತ್ನಿಗೆ ಮೋಸ; ಫೇಸ್ ಬುಕ್ ಗೆಳತಿಯೊಂದಿಗೆ ಪತಿ ಸರಸ; ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ ಹೆಂಡತಿ*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಕಟ್ಟಿಕೊಂಡ ಪತ್ನಿಗೆ ಮೋಸ ಮಾಡಿ ದ್ರೋಹ ಬಗೆದೆ ಪತಿ ಮಹಾಶಯನೊಬ್ಬ ಫೇಸ್ ಬುಕ್ ನಲ್ಲಿ ಪರಿಚಯಳಾಗಿದ್ದ ಇನ್ನೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿ ಪತ್ನಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಪತಿಯ ಹಿಂಸೆ, ಕಿರುಕುಳಕ್ಕೆ ಬೇಸತ್ತ ಪತ್ನಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಸೋಮಯಾಜಲಹಳ್ಳಿಯಲ್ಲಿ ನಡೆದಿದೆ. ಪತಿ ಶಶಿಕುಮಾರ್ ತನ್ನ ಪತ್ನಿಗೆ ಮೋಸ ಮಾಡಿ, ಫೇಸ್ ಬುಕ್ ನಲ್ಲಿ ಪರಿಚಯಳಾದ ಬೇರೊಬ್ಬಳ ಜತೆ ಸಂಬಂಧವಿಟ್ಟುಕೊಂಡು ಪತ್ನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಬೇರೊಬ್ಬಳ ಜತೆ ಇರುವ ಫೋಟೋಗಳನ್ನು ಪತಿ ಮಹಾಶಯ ಅಪ್ ಲೋಡ್ ಮಾಡಿದ್ದ. ಕಳೆದ 4-5 ತಿಂಗಳಿಂದ ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

*ಹೃದಯಾಘಾತ: SSLC ವಿದ್ಯಾರ್ಥಿ ದುರ್ಮರಣ*

Home add -Advt

https://pragati.taskdun.com/sslc-studentdeathheart-attacksorabashivamogga/

Related Articles

Back to top button