Latest
ಪತ್ನಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತ ಪಾಪಿ ಪತಿ; ಹೆಂಡತಿಯ ಗುಪ್ತಾಂಗಕ್ಕೆ ಆಸಿಡ್ ಎರಚಿದ ಕಿರಾತಕ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಪತಿ ಮಹಾಶಯನೊಬ್ಬ ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತು, ತನ್ನ ಮಾತು ಕೇಳಿಲ್ಲ ಎಂಬ ಕಾರಣಕ್ಕೆ ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿರುವ ಘಟನೆ ಬಿಹಾರದ ಭಾಗಲ್ಪುರದ ಹಸಗಂಜ್ ಗ್ರಾಮದಲ್ಲಿ ನಡೆದಿದೆ.
ಸ್ನೇಹಿತನೊಂದಿಗೆ ಜೂಜಾಟಕ್ಕೆ ಇಳಿದಿದ್ದ ವ್ಯಕ್ತಿ ಹಣವೆಲ್ಲ ಕಳೆದುಕೊಂಡು ನಂತರ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ. ಸ್ನೇಹಿತನ ಜೊತೆ ಹೋಗಲು ಪತ್ನಿ ನಿರಾಕರಿಸಿದ್ದಾಳೆ. ಆದರೂ ಬಲವಂತದಿಂದ ಪತ್ನಿಯನ್ನು ಎಳೆದೊಯ್ದು ಸ್ನೇಹಿತನಿಗೆ ಒಪ್ಪಿಸಿದ್ದಾನೆ. ತಪ್ಪಿಸಿಕೊಂಡು ವಾಪಸ್ ಬಂದ ಪತ್ನಿಯನ್ನು ಹಿಡಿದು ಥಳಿಸಿ ಚಿತ್ರ ಹಿಂಸೆ ನೀಡಿದ್ದಾನೆ. ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.




