Latest

ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕಾರವಾರ: ವ್ಯಕ್ತಿಯೋರ್ವ ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಚಿತ್ತಾಕುಲಾದಲ್ಲಿ ನಡೆದಿದೆ.

ಇಲ್ಲಿನ ನಾಕುದಾಮೊಹಲ್ಲಾ ನಿವಾಸಿ ಮಹ್ಮದ್ ಶಫೀಕ್ ಖಾನ್ (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಾಲ ತೀರಿಸಲಾಗದೇ ಮನನೊಂದಿದ್ದ ಮಹ್ಮದ್, ಗೋವಾದಲ್ಲಿದ್ದ ತನ್ನ ಪತ್ನಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ತನಗೆ ಜೀವನವೇ ಸಾಕಾಗಿದೆ. ಸಾಯಬೇಕು ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾನೆ.

Home add -Advt

ಪತ್ನಿಯೊಂದಿಗೆ ಮಾತನಾಡುತ್ತಲೇ ಮನೆಯ ಹಾಲ್ ನಲ್ಲಿಯೇ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾನೆ. ಪತ್ನಿ ಅಂಥಹ ನಿರ್ಧಾರ ಮಾಡಬೇಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕಣ್ಣೀರಿಟ್ಟಿದ್ದಾಳೆ. ಆದರೆ ಕರೆ ಕಟ್ ಮಾಡಿದ ಮೊಹ್ಮದ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಕ್ಷಣ ಪತ್ನಿ ಮೊಹ್ಮದ್ ಅಕ್ಕನಿಗೆ ವಿಷಯ ತಿಳಿಸಿದ್ದಾಳೆ ಆಕೆ ಬರುವಷ್ಟರಲ್ಲಿ ಮಹ್ಮದ್ ಆತ್ಮಹತ್ಯೆಗೆ ಶರಣಾಗಿದ್ದರು. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ; ಶಿರಸ್ತೇದಾರ್ ಸೇರಿ ಮೂವರ ಬಂಧನ

Related Articles

Back to top button