Kannada NewsKarnataka NewsLatest
*ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋದ ಪತಿಯೂ ಸಾವು; ಅನಾಥರಾದ ಇಬ್ಬರು ಮಕ್ಕಳು*

ಪ್ರಗತಿವಾಹಿನಿ ಸುದ್ದಿ; ಉಡುಪಿ: ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದು ಪತ್ನಿ ನೀರಿನ ಹೊಂಡಕ್ಕೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ಪತಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ.
ಪತ್ನಿ ಯಶೋಧ ಹಾಗೂ ಪತಿ ಇಮ್ಯಾನುವಲ್ ಮೃತ ದಂಪತಿ. ಸಣ್ಣ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಪತ್ನಿ ಯಶೋಧ ತೋಟದಲ್ಲಿದ್ದ ನೀರಿನ ಹೊಂಡಕ್ಕೆ ಹಾರಿದ್ದಾಳೆ. ಪತ್ನಿ ಹೊಂಡಕ್ಕೆ ಹಾರುತ್ತಿದ್ದಂತೆ ಆಕೆಯನ್ನು ರಕ್ಷಿಸಲೆಂದು ಪತಿಯೂ ಹೊಂಡಕ್ಕೆ ಹಾರಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಮೃತ ದಂಪತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರು ಎಂದು ತಿಳಿದುಬಂದಿದೆ. ತೋಟದ ಕೆಲಸಕ್ಕಾಗಿ ಕಾರ್ಕಳದ ನಲ್ಲೂರಿಗೆ ಬಂದು ಕುಟುಂಬ ವಾಸವಾಗಿತ್ತು. ಕಾರ್ಕಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.