ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ: ಯುದ್ಧ ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುವ ಹೈಪರ್ ಸಾನಿಕ್ ತಂತ್ರಜ್ಞಾನ ವಾಹನವೊಂದನ್ನ ಭಾರತ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಡಿಆರ್ ಡಿಒ ಮಾಹಿತಿ ನೀಡಿದೆ.
ಇಂದು ಒಡಿಶಾದ ಬಾಲಸೂರ್ ನ ಎಪಿಜೆ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನ ವಾಹನದ ಯಶಸ್ವಿ ಪ್ರಯೋಗ ನಡೆಸಲಾಯಿತು. ಇದು ಹೈಪರ್ ಸಾನಿಕ್ ಕ್ಷಿಪಣಿ ಅಭಿವೃದ್ಧಿ ನಿಟ್ಟಿನಲ್ಲಿ ಡಿಆರ್ ಡಿಒ ಶಕ್ತಿ ಹೆಚ್ಚಿಸಲಿದೆ.
ಡಿ ಆರ್ ಡಿಒ ಮುಖ್ಯಸ್ಥ ಸತೀಶ್ ರೆಡ್ದಿ ನೇತೃತ್ವದ ಹೈಪರ್ ಸಾನಿಕ್ ಕ್ಷಿಪಣಿ ತಂಡ ಈ ವಾಹನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ ವಾಹನದ ಯಶಸ್ವಿ ಪರೀಕ್ಷೆ ನಡೆಸಿದ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳ ನಂತರದ ಸ್ಥಾನದಲ್ಲಿ ಭಾರತ ನಿಲ್ಲುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ