Film & EntertainmentKarnataka NewsLatest

*ನಟ, ರಂಗನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟ, ರಂಗನಿರ್ದೇಶಕ, ನಾಟಕಕಾರ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ನಗೆ ಸರದಾರ ಎಂದೇ ಖ್ಯಾತಿ ಪಡೆದಿದ್ದ ನಟ ಯಶವಂತ್ ಸರ್ ದೇಶಪಾಂಡೆ ಹಾಸ್ಯ ನಾಟಕಗಳಿಂದ ಜನಪ್ರಿಯತೆ ಪಡೆದಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ. ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು

Home add -Advt

ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.

ಚಿಕ್ಕಂದಿನಿಂದಲೂ ನಾಟಕದಲ್ಲಿ ಬೆಳೆದ ಆಸಕ್ತಿ. ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೊಮ. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ಪಡೆದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ.

ರಾಜ್ಯಾದ್ಯಂತ ಹಲವಾರು ನಾಟಕಗಳ ನಿರ್ದೇಶನ. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ.

ರೇಡಿಯೋ, ದೂರದರ್ಶನಗಳಿಗಾಗಿ ಹಲವಾರು ಕಾರ್ಯಕ್ರಮಗಳು. ಗುರು ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ನಗೆ ನಾಟಕಗಳನ್ನು ತಿಳಿ ಹಾಸ್ಯದ ಜೊತೆಗೆ ರುಚಿಕರವಾದ ಸವಿಯಾದ ಊಟವನ್ನೂ ಎಂ.ಟಿ.ಆರ್‌. ಸಹ ಯೋಗದೊಡನೆ ಯೋಚಿಸಿ ರಂಗ ಸಂಭ್ರಮದಡಿ ನೀಡಿದ ಕಾರ್ಯಕ್ರಮಗಳು, ರಾಜ್ಯದೆಲ್ಲೆಡೆ ಪಡೆದ ಪ್ರಶಂಸೆ. ’ರಾಶಿ ಚಕ್ರ’ ನಗೆ ನಾಟಕದಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ. ದೃಶ್ಯರೂಪದಲ್ಲಿ ವಿಡಿಯೋ ಪ್ರದರ್ಶನಗಳ ಮೂಲಕ ಮಾಡಿದ ರಂಗ ಕ್ರಾಂತಿಯುದಾಗಿತ್ತು.

ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.

ಸಹಿ ರೆ ಸಹಿ (ಮೂಲ:ಮರಾಠಿ)
ಕಾಲಚಕ್ರ
ಐಡಿಯಾ ಮಾಡ್ಯಾರ ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ.
ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕಮಲಹಾಸನ್ ರ ಪಾತ್ರದಲ್ಲಿ ಉತ್ತರಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ. 2008 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪರ ಪ್ರಚಾರದಲ್ಲಿ ತಮ್ಮ ನಾಟಕಗಳನ್ನು ಮಾಡಿಸಿದ್ದರು.

Related Articles

Back to top button