Kannada NewsKarnataka NewsNational

ನನಗೆ ಜನ್ಮ ನೀಡಲು ನನ್ನ ಒಪ್ಪಿಗೆ ಪಡೆದಿಲ್ಲ: ಹೆತ್ತವರ ವಿರುದ್ಧ ದೂರು ನೀಡಿದ ಮಹಿಳೆ

ಪ್ರಗತಿವಾಹಿನಿ ಸುದ್ದಿ: ಜನ್ಮನೀಡುವ ಮೊದಲು ತನ್ನ ಒಪ್ಪಿಗೆ ಪಡೆದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಹೆತ್ತವರ ಮೇಲೆಯೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 ಅಮೆರಿಕದ ನ್ಯೂಜೆರ್ಸಿ ನಿವಾಸಿ ಕಂಟೆಂಟ್ ಕ್ರಿಯೇಟರ್ ಥಿಯಾಜ್ ತಮ್ಮ ಟಿಕ್‌ಟಾಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಗರ್ಭಧರಿಸುವ ಮೊದಲು ಅನುಮತಿ ಪಡೆದಿಲ್ಲ. ಜನ್ಮ ನೀಡುವ ಮುನ್ನ ತಂದೆ-ತಾಯಿ ನನ್ನನ್ನು ಸಂಪರ್ಕ ಮಾಡಲಿಲ್ಲ. ನಾನು ನಿಜವಾಗಿಯೂ ಇಲ್ಲಿಗೆ ಬರಲು ಬಯಸಿದ್ದೇನೆಯೇ? ಎಂದು ಕೇಳಲಿಲ್ಲ. ಜೀವನ ನಿರ್ವಹಣೆಗಾಗಿ ಯಾವ ರೀತಿ ಬದುಕಬೇಕು ಎನ್ನುವುದು ನನಗೆ ತಿಳಿದಿರಲಿಲ್ಲ. ಮೊದಲೇ ಕೇಳಿದ್ದರೆ ಒಪ್ಪಿಗೆ ನೀಡುತ್ತಿರಲಿಲ್ಲ. ಹಾಗಾಗಿ ನನ್ನ ಪಾಲಕರ ಮೇಲೆ ಕೇಸ್ ಹಾಕಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಹಲವಾರು ಕಮೆಂಟ್‌ ಗಳು ಬಂದಿದ್ದು, ನೀವು ನಿಜವಾಗಲೂ ದೂರು ನೀಡಿದ್ದೀರಾ? ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಾ? ಅಥವಾ ಹಣ ಪಡೆಯುವ ಉದ್ದೇಶವಿದೆಯೇ? ಎಂದು ಕೇಳಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button