Kannada NewsKarnataka News

2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದೇನೆ; ಹ್ಯಾಟ್ರಿಕ್ ಗೆಲುವಿಗೆ ಸಹಕರಿಸಿ – ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಕಳೆದ ಎರಡು ಬಾರಿ ನನಗೆ ಚುನಾಯಿತಗೊಳಿಸಿ ನಿಮ್ಮೆಲ್ಲರ ಸೇವೆಗೈಯ್ಯುವ ಅವಕಾಶ ಕಲ್ಪಿಸಿದ್ದಿರಿ. ಅದಕ್ಕೆ ನಾನೂ ಸಹ ಈ ನನ್ನ ಎರಡು ಅವಧಿಯಲ್ಲಿ ನನ್ನ ತವರು ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸಿ ಸುಮಾರು ರೂ.೨ ಸಾವಿರ ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಎಲ್ಲರೂ ನನ್ನ ಹ್ಯಾಟ್ರಿಕ್ ಪೂರ್ಣಗೊಳಿಸಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು.
ತಾಲೂಕಿನ ಬೇಡಕಿಹಾಳ ಗ್ರಾಮದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ಸಭಾಗ್ರಹದಲ್ಲಿ ಶುಕ್ರವಾರ ಜರುಗಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ’ಇನ್ನು ಮುಂದೆ ನನ್ನ ತವರು ಕ್ಷೇತ್ರ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ ಹೊಂದಿದನೆ’ ಎಂದರು.
’ಮಹಾಡಿಕ ಕುಟುಂಬ ಹಾಗೂ ನಮ್ಮ ಜೊಲ್ಲೆ ಕುಟುಂಬಕ್ಕೆ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಅವರು ಕಳೆದೆರಡು ದಿನಗಳಿಂದ ನನ್ನೊಂದಿಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಸದಾ ಬೆಂಬಲ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಉಭಯ ರಾಜ್ಯಗಳ ಗಡಿಭಾಗದ ಮುಖಂಡರು ಶ್ರಮಿಸುತ್ತಿದ್ದು ನನ್ನ ಗೆಲುವು ಸುಗಮವಾಗಲಿದೆ’ ಎಂದರು.
ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ, ಅಮಲ ಮಹಾಡಿಕ, ಮಾಜಿ ಶಾಸಕ ಸುರೇಶ ಹಳವನಕರ, ಪೃಥ್ವಿ ಕತ್ತಿ, ರಾಮಚಂದ್ರ ಡೋಮನೆ, ಮಲಗೊಂಡಾ ಪಾಟೀಲ, ಬಾಳಾಸಾಹೇಬ ಕದಮ, ತಾತ್ಯಾಸಾಹೇಬ ಕೇಸ್ತೆ, ಅಣ್ಣಾಸಾಹೇಬ ಪಾಟೀಲ, ಸಂಜಯ ಪಾಟೀಲ, ಸುನೀಲ ನಾರೆ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಪವನ ಪಾಟೀಲ ಸ್ವಾಗತಿಸಿ ವಂದಿಸಿದರು.

Related Articles
https://pragati.taskdun.com/rally-in-some-parts-of-nippani-to-campaign-for-minister-jolle-maharashtra-mp-dhananjaya-mahadika-participates/

Home add -Advt

Related Articles

Back to top button