Kannada NewsKarnataka NewsNationalPolitics

*ನಾನು ರಾಜೀನಾಮೆ ಕೊಡುವ ಯಾವುದೇ ತಪ್ಪು ಮಾಡಿಲ್ಲ: ಸಿಎಂ ಖಡಕ್ ಉತ್ತರ*

ಪ್ರಗತಿವಾಹಿನಿ ಸುದ್ದಿ : ಮುಡಾ ಪ್ರಕರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ನಾನು ರಾಜೀನಾಮೆ ಕೊಡುವಂತಹ ಯಾವುದೇ ತಪ್ಪು ಮಾಡಿಲ್ಲ ಎಂದು ಖಡಕ್ ಆಗಿ ಹೇಳಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡುವ ಬಗ್ಗೆ ನಾವು ನಿರೀಕ್ಷೆ ಮಾಡಿದ್ವಿ ಎಂದ ಅವರು, ರಾಜ್ಯಪಾಲರಿಗೆ ದೂರು ಬಂದ ದಿನವೇ ನನಗೆ ಶೋಕಾಸ್ ನೋಟಿಸ್‌ ನೀಡಿದ್ದು, ರಾಜಕೀಯ ಷಡ್ಯಂತ್ರವಲ್ಲದೇ ಬೇರೆನೂ ಅಲ್ಲ ಎಂದು ಕಿಡಿಕಾರಿದರು.

Home add -Advt

ಹೆಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಮುರುಗೇಶ್ ನಿರಾಣಿ ಮೇಲೆ ದೂರು ಇವೆ. ಅವರಿಗೆ ಯಾಕೆ ರಾಜ್ಯಪಾಲರು ಶೋಕಾಸ್ ನೋಟಿಸ್ ಸಹ ನೀಡಿಲ್ಲ ಎಂದು ಪ್ರಶ್ನಿಸಿದರು. ಪ್ರಾಸಿಕ್ಯೂಷನ್ ಗೆ ನೀಡಿರುವ ಹಿಂದೆ ಬಿಜೆಪಿ-ಜೆಡಿಎಸ್ ಕುತಂತ್ರವಿದ್ದು, ನಾವು ಕಾನೂನು ಹೋರಾಟ ಮಾಡುತ್ತೇವೆ. ಇಡೀ ಹೈಕಮಾಂಡ್, ಸಚಿವ ಸಂಪುಟ, ನಮ್ಮೆಲ್ಲಾ ಶಾಸಕರು ನನ್ನ ಬೆನ್ನಿಗೆ ಇದ್ದಾರೆ. ನನ್ನ ರಾಜೀನಾಮೆ ಕೇಳುವ ಅವರಿಗೆ ನೈತಿಕತೆ ಇಲ್ಲ ಎಂದು ಸಿಎಂ ಗುಡುಗಿದರು.

Related Articles

Back to top button