*ಸೌಜನ್ಯಳನ್ನು ಕಿಡ್ನಾಪ್ ಮಾಡಿದನ್ನು ನೋಡಿದ್ದೇನೆ: ಎಸ್ಐಟಿಗೆ ಪತ್ರ ಬರೆದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ದರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ. ನನ್ನ ಮುಂದೆಯೇ ಸೌಜನ್ಯ ಕಿಡ್ನಾಪ್ ಆಯ್ತು ಎಂದು ಮಹಿಳೆ ಓರ್ವಳು ದೂರು ನೀಡಿದ್ದಾಳೆ.
ನಾನೂ ಸೌಜನ್ಯ ಅಪಹರಣ ಕಣ್ಣಾರೆ ಕಂಡೆ ಅಂತಾ ಎಸ್ಐಟಿಗೆ ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಅನ್ನೋರು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಸೌಜನ್ಯ ಕೊಲೆ ಕೇಸ್ ರೀ ಓಪನ್ ಆಗುತ್ತೆ ಎಂದು ಚರ್ಚೆಗಳು ಶುರುವಾಗಿದೆ.
ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಸ್ಐಟಿಗೆ ದೂರು ನೀಡಿದ್ದು ಒಂದು ಹುಡುಗಿಯನ್ನು ಕಿಡ್ನಾಪ್ ಮಾಡಿದ್ದನ್ನ ಕಂಡಿದ್ದೇನೆ. ನಾನು ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾಗ ಆ ಘಟನೆ ನಡೆದಿತ್ತು ಎಂದು ಬೆಳ್ತಂಗಡಿ ವಿಶೇಷ ತನಿಖಾ ದಳಕ್ಕೆ ಚಿಕ್ಕಕೆಂಪಮ್ಮ ಮೌಖಿಕವಾಗಿ ದೂರು ದಾಖಲಿಸಿದ್ದಾರೆ. ಆದ್ದರಿಂದ ಎಸ್ಐಟಿ ಅಧಿಕಾರಿಗಳು ದೂರವಾಣಿ ಮೂಲಕ ವಿವರಣೆ ಪಡೆದಿದ್ದು, 45 ನಿಮಿಷ ಕಾಲ ಪ್ರಕರಣದ ಬಗ್ಗೆ ಚರ್ಚಿಸಿದ್ದಾರಂತೆ. ಈ ಚರ್ಚೆ ಎಸ್ಐಟಿ ಸಹಾಯವಾಣಿ ಮೂಲಕ ನಡೆದಿದೆ.
ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾಗ ನನ್ನ ಕಣ್ಣ ಮುಂದೆಯೇ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ರು ಎಂದು ಚಿಕ್ಕಕೆಂಪಮ್ಮ ಹೇಳಿದ್ದು ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.