ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಪ್ರೇಮ ವೈಫಲ್ಯದಿಂದ ವಿಪರೀತ ಮದ್ಯ ಸೇವಿಸುತ್ತಿದ್ದೆ, ಡ್ರಗ್ ಚಟಕ್ಕೂ ದಾಸಳಾಗಿದ್ದೆ ಕೊನೆಗೆ ಕೈ ನರ ಕಟ್ ಮಾಡಿಕೊಂಡು ಆತ್ಮಹತ್ಯೆಗೂ ಯತ್ನಿಸಿಸದ್ದೆ ಎಂದು ನಟಿ ಫಾಯಲ್ ರೋಹ್ಟಗಿ ತಮ್ಮ ಗತ ಜೀವನದ ಕರಾಳ ಇತಿಹಾಸವೊಂದನ್ನು ಬಹಿರಂಗಪಡಿಸಿದ್ದಾರೆ.
ಕಂಗನಾ ರಾಣಾವತ್ ಅವರು ಖಾಸಗಿ ವಾಹಿನಿಯೊಂದರಲ್ಲಿ ನಡೆಸಿಕೊಡುವ ರಿಯಾಲಿಟಿ ಶೋ ಲಾಕ್ ಅಪ್ ಅನೇಕ ಸೆಲೆಬ್ರಿಟಿಗಳ ಜೀವನದಲ್ಲಿ ನಡೆದ ಶಾಕಿಂಗ್ ಸತ್ಯ ಘಟನೆಗಳನ್ನು ಕಿರು ತೆರೆಯಮೇಲೆ ಬಿತ್ತರಗೊಳ್ಳುತ್ತಿದೆ. ಈ ಸಾಲಿನಲ್ಲಿ ಫಾಯಲ್ ಅವರು ಹೇಳಿಕೊಂಡಿರುವ ತಮ್ಮ ಬದುಕಿನಲ್ಲಿ ನಡೆದ ಕಹಿ ಅಧ್ಯಾಯದ ನೆನಪು ಚರ್ಚಿತವಾಗುತ್ತಿದೆ.
ಫಾಯಲ್ ತಮಗೆ ಯಾರ ಜೊತೆ ಲವ್ ಅಫೇರ್ ಇತ್ತು ಎಂದು ಹೇಳಿಕೊಂಡಿಲ್ಲ. ಆದರೆ ತಮ್ಮ ಪ್ರೇಮ ವೈಫಲ್ಯದ ಯಾತನೆಯ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಅವರು ಸಂಗ್ರಾಂ ಸಿಂಗ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ. ಇವರಿಬ್ಬರೂ ಸಧ್ಯದಲ್ಲೇ ಮದುವೆಯಾಗುವ ಸೂಚನೆ ನೀಡಿದ್ದಾರೆ.
ನಿರ್ಮಾಣ ಹಂತದಲ್ಲೇ ಕುಸಿದು ಬಿತ್ತು 1700 ಕೋಟಿ ರೂ. ಸೇತುವೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ