GIT add 2024-1
Beereshwara 33

​ಜಿಲ್ಲೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ; ಮೃಣಾಳ್ ಹೆಬ್ಬಾಳ್ಕರ್ 

Anvekar 3
Cancer Hospital 2

*ಬೆಳಗಾವಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಆಶಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಇಡೀ ದೇಶ​ದಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವ ಆಶಯ ಇದ್ದು; ಜಿಲ್ಲೆಯ ಜನರು ತಮಗೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ. 

​ಗೋಕಾಕ ತಾಲೂಕಿನ ಹಿರೇನಂದಿಯಲ್ಲಿ​ ಭಾನುವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ; ಹಾಗೆಯೇ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ಮಗನಾಗಿ, ನಿಮ್ಮ ಮನೆ ಮಗನಾಗಿ ಸದಾ ನಿಮ್ಮೆಲ್ಲರ ಸೇವೆ ಮಾಡಲು ನನಗೊಮ್ಮೆ ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.  

Emergency Service

ಕ್ಷೇತ್ರದ ಯಾವುದೇ ಕೆಲಸ ಕಾರ್ಯ ಇರಲಿ; ವೈಯಕ್ತಿಕವಾದ ಕೆಲಸವೇ ಆಗಲಿ, ಯಾವುದೇ ಕಾರಣಕ್ಕೂ ಜನರು ಹುಬ್ಬಳ್ಳಿಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ ಎಂದ ಮೃಣಾಳ್ ಹೆಬ್ಬಾಳ್ಕರ್,  ನಾನು ನಿಮ್ಮ ಮನೆ ಮಗ; ಸದಾ ನಿಮ್ಮೊಂದಿಗೆ ಇರುವವನು; ನಿಮ್ಮ ಯಾವುದೇ ಕೆಲಸವಿರಲಿ; ಅದನ್ನು ಶಿರಸಾವಹಿಸಿ ಮಾಡಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.  

ರಾಜ್ಯದ ನಮ್ಮ ನಾಯಕರಾದ ಸಿದ್ದರಾಮಯ್ಯನವರು ಮತ್ತು ಸತೀಶ್ ಜಾರಕಿಹೊಳಿಯವರ ಆಶೀರ್ವಾದದಿಂದ ಬರುವ ದಿನಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಇಡೀ ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆನ್ನುವ ಆಶಯ ಇದೆ; ಯಾವುದೇ ರೀತಿಯಿಂದಲೂ ​ಜಿಲ್ಲೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ; ನಮ್ಮ ಯೋಜನೆಗಳು ಕೂಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ಇದೇ ವೇಳೆ ಹೇಳಿದರು. 

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ತೇಜಸ್ವಿನಿ ಗೌಡ, ಸಿದ್ದಲಿಂಗಣ್ಣ ದಾಮ್ಲೆ, ಮಹಾಂತೇಶ್ ಕಡಾಡಿ, ಚಂದ್ರಶೇಖರ್ ಕೊ​ಣ್ಣೂರ್,   ದೇವರಾಜು ಕಗ್ಗೂರು, ಸುಭಾಷ್ ಅಕ್ಕಿ, ಸಂತೋಷ್ ಅಂಕಲಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2