ಪ್ರಗತಿವಾಹಿನಿ ಸುದ್ದಿ: ಅಥಣಿ ತಾಲೂಕಿನ ನಾಗನೂರ ಏಕೆ ಗ್ರಾಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆ ಮತ್ತು ಚಿದಾನಂದ ಸವದಿ ಅವರ ಬಳಗದ ನೇತೃತ್ವದಲ್ಲಿ ಜರುಗಿದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಹಾಗೂ ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭವನ್ನು ಲಕ್ಷ್ಮಣ ಸವದಿ ಹಾಗೂ ಚಲನಚಿತ್ರ ನಟಿ ಮಾನ್ವಿತಾ ಕಾಮತ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಹಾಸ್ಯ ನೃತ್ಯ ಸಂಗೀತ ಸಮ್ಮಿಲನದ ಮಹಾ ಮನರಂಜನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಯುವ ನಾಯಕ ಚಿದಾನಂದ ಸವದಿ, ಪುರಸಭೆ ಸದಸ್ಯ ಸಂತೋಷ ಸಾವಡಕರ, ರಾಮನಗೌಡ ಪಾಟಿಲ, ತಿವು ತೇಲಿ, ಮಹಾದೇವ ನಾಗನೂರ, ಸುಭಾಷ ಸೊಂದಕರ, ಚೆನ್ನಟಿಸು ಹುಲಗಬಾಳ, ಪ್ರದೀಪ ನಂದಗಾಂವ, ಪ್ರಶಾಂತ ಆಕ್ಟೋಳ, ಶಶಿಕಾಂತ ಸವದಿ, ಸುಮಿತ ಸವದಿ, ಮಲ್ಲೇಶ ಸವದಿ, ರಮೇಶ ಸವದಿ, ಸೇರಿದಂತೆ ಹಲವರು ಗಣ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
ನಾಗನೂರು ಪಿಕೆ ಗ್ರಾಮ ನನ್ನ ಹುಟ್ಟೂರು ನನಗೆ ಇಡಿ ರಾಜ್ಯಕ್ಕೆ ಪರಿಚಯ ಮಾಡಿ ಕೊಟ್ಟಿರುವುದರಲ್ಲಿ ಸಿಂಹ ಪಾಲು ಈ ನನ್ನ ಗ್ರಾಮದ ಜನತೆಗೆ ಸಲ್ಲುತ್ತದೆ, ನನ್ನವರಿಗೆ ನನ್ನ ಮೇಲೆ ಒಂದೆ ಆಶೆ ನಮ್ಮ ಊರಿನ ಮಗ ರಾಜ್ಯದಲ್ಲಿ ನಮ್ಮ ಊರಿನ ಕೀರ್ತಿಯನ್ನು ತರಬೇಕು ಅನ್ನೊ ಬಯಕೆ ಅಷ್ಟೇ ನಿಮ್ಮೆಲ್ಲರಿಗೂ ನಾನು ಭರವಸೆಯನ್ನು ಕೊಡುತ್ತೇನೆ ಈ ಊರಿಗೆ ಮುಂದಿನ ದಿನಮಾನದಲ್ಲಿ ಹೂ ತರುವ ಕೆಲಸ ಮಾಡುತ್ತೇನೆ ಹೊರತು ಹುಲ್ಲು ತರುವ ಕೆಲಸ ಮಾಡುವದಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ