
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇತ್ತೀಚೆಗೆ ಫ್ರಾನ್ಸ್ ನಿಂದ ತರಲಾಗಿದ್ದ 5 ರಫೇಲ್ ಯುದ್ಧ ವಿಮಾನಗಳು ಇಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾದವು.
ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ಸೇನಾಪಡೆಯ ಸಚಿವೆ ಫ್ಲೋರೆನ್ಸ್ ಪರ್ಲಿ ಸಮ್ಮುಖದಲ್ಲಿ ಐದು ರಫೇಲ್ ಯುದ್ಧ ವಿಮಾನಗಳನ್ನು ಐಎ ಎಫ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.
ರಫೇಲ್ ವಿಮಾನದ ವಿದ್ಯುಕ್ತ ಅನಾವರಣ, ಸಾಂಪ್ರದಾಯಿಕ ಪೂಜೆ, ರಫೇಲ್ ಮತ್ತು ತೇಜಸ್ ವಿಮಾನಗಳ ವಾಯು ಪ್ರದರ್ಶನದ ಬಳಿಕ ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ಜಲ ಫಿರಂಗಿ ಮೂಲಕ ವಂದನೆ ಮೂಲಕ ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್‌ಗೆ ವಿದ್ಯುಕ್ತವಾಗಿ ಸೇರ್ಪಡೆಗೊಳಿಸು್ಲಾಯಿತು.
ರಕ್ಷಣಾ ವಲಯ ಮುಖಸ್ಥ ಜನರಲ್ ಬಿಪಿನ್ ರಾವತ್, ವಾಯು ಸಿಬ್ಬಂದಿ ಮುಖ್ಯಸ್ಥ ಮಾರ್ಷಲ್ ವಾಯು ಸಿಬ್ಬಂದಿ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಇಲಾಖೆ ಆರ್ & ಡಿ ಕಾರ್ಯದರ್ಶಿ ಡಾ.ಜಿ.ಸತೀಶ್ ರೆಡ್ಡಿ ಮತ್ತು ಅಧ್ಯಕ್ಷ ಡಿ.ಆರ್.ಡಿ.ಒ ಜೊತೆಗೆ ರಕ್ಷಣಾ ಮತ್ತು ಸಶಸ್ತ್ರ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.