Kannada NewsKarnataka NewsLatest

*ಹಿರಿಯ IAS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು: ಫರ್ನೀಚರ್ ಮಾರಾಟ ಹೆಸರಲ್ಲಿ ವಂಚನೆ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಐಎ ಎಸ್ ಅಧಿಕಾರಿ ಮಣಿವಣ್ಣನ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದಿರುವ ವಂಚಕರು, ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರನ್ನು ವಂಚಿಸಿರುವ ಘಟನೆ ನಡೆದಿದೆ.

ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ನಾಲ್ಕಕ್ಕೂ ಹೆಚ್ಚು ನಕಲಿ ಖಾತೆ ತೆರೆದು ಎಲ್ಲದರಲ್ಲಿಯೂ ಮಣಿವಣ್ಣನ್ ಅವರ ಫೋಟೋ, ಹೆಸರು ಬಳಸಲಾಗಿದೆ. ಈ ಖಾತೆಗಳಿಗಳಿಂದ ಮಣಿವಣ್ಣನ್ ಅವರ ಸ್ನೇಹಿತರು, ಆಪ್ತರಿಗೆ ಸಂದೇಶ ಕಳುಹಿಸಿ ವಂಚಿಸಲಾಗಿದೆ.

ಸಿಆರ್ ಪಿಎಫ್ ನಲ್ಲಿದ್ದವರ ವರ್ಗಾವಣೆಯಾಗುತ್ತಿದೆ. ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ನಾನು ಒಮ್ಮೆ ನೋಡಿದ್ದೇನೆ. ನಿಮಗೆ ಬೇಕಾದರೆ ಖರೀದಿಸಬಹುದು ಎಂದು ವಿವಿಧ ರೀತಿಯಲ್ಲಿ ಮೆಸೇಜ್ ಕಳುಹಿಸಿರುವ ಖದೀಮರು ಕರೆ ಮಾಡಿ ವಂಚಿಸುತ್ತಿದ್ದಾರೆ. ಈ ಸಂದೇಶ ನಂಬಿದ ಇಬ್ಬರು ಸೈಬರ್ ವಂಚಕರಿಂದ ಮೋಸ ಹೋಗಿದ್ದಾರೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Home add -Advt

Related Articles

Back to top button