ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲಕನನ್ನು ವರ್ಗಾವಣೆ ಮಾಡಿದ್ದಕ್ಕೆ ಐಎ ಎಸ್ ಅಧಿಕಾರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸರ್ವೆ ಸೆಟ್ಲಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕಮೀಷ್ನರ್ ಆಗಿದ್ದ ಮುನೀಷ್ ಮೌದ್ಗಿಲ್ ಅವರಿಗೆ ಬೆದರಿಕೆ ಕರೆ ಮಾಡಿದ್ದ. ಬಂಧಿತ ಆರೋಪಿಯನ್ನು ಗೋವಿಂದರಾಜು ಎಂದು ಗುರುತಿಸಲಾಗಿದೆ.
ಆಡಳಿತಾತ್ಮಕ ಕಾರಣಗಳಿಗೆ ಕಾರು ಚಾಲಕ ಆನಂದ್ ಎಂಬಾತನನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿದ್ದ ದಿನವೇ ಕಮಿಷ್ನರ್ ಮೌದ್ಗಿಲ್ ಅವರಿಗೆ ಕರೆ ಮಾಡಿದ್ದ ಆರೋಪಿ ಅಬಕಾರಿ ಸಚಿವ ಗೋಪಾಲಯ್ಯ ಅವರ ಪಿಎ ಎಂದು ಹೇಳಿಕೊಂಡು ವರ್ಗಾವಣೆ ಕ್ಯಾನ್ಸಲ್ ಮಾಡುವಂತೆ ಧಮ್ಕಿ ಹಾಕಿದ್ದ.
ಟ್ರು ಕಾಲರ್ ನಲ್ಲಿ ಗೋವಿಂದರಾಜ ಟಿ ಎಂದು ನಂಬರ್ ತೋರಿಸುತ್ತಿತ್ತು, ಈ ಬಗ್ಗೆ ಮುನೀಷ್ ಮೌದ್ಗಿಲ್ ಅವರು, ಸಚಿವ ಗೋಪಾಲಯ್ಯ ಅವರ ಪಿಎ ಗೆ ಮಾಹಿತಿ ನೀಡಿದ್ದಾರೆ. ಆದರೆ ತಾವು ಅಂತಹ ಯಾವುದೇ ಕರೆ ಮಾಡಿಲ್ಲ ಎಂದು ಸಚಿವರ ಪಿಎ ತಿಳಿಸಿದ್ದಾರೆ ಎನ್ನಲಾಗಿದೆ.
ಬೆದರಿಕೆ ಕರೆ ಬೆನ್ನಲ್ಲೇ ಮುನೀಷ್ ಮೌದ್ಗಿಲ್ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಆರೋಪಿ ಗೋವಿಂದರಾಜುನನ್ನು ಪೊಲೀಸರು ಬಂಧಿಸಿದ್ದಾರೆ.
ಅಮರನಾಥ್ ದಲ್ಲಿ ಮೇಘಸ್ಫೋಟ; 16 ಯಾತ್ರಿಕರ ಸಾವು; ಸರ್ಕಾರದಿಂದ ಹೆಲ್ಪ್ ಲೈನ್ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ