
ತಿಂಗಳ ಕಾಲ ಸಂತ್ರಸ್ತರ ನೆರವಿಗೆ ನಿಲ್ಲಲು ಐಎಂಎ ನಿರ್ಧಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಸುಮಾರು 8 ದಿನಗಳ ಕಾಲ ಅಪಾರ ಪ್ರಮಾಣದಲ್ಲಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಆಸ್ತಿಗಳನ್ನು ಕಳೆದುಕೊಡಿದ್ದಾರೆ. ಮನೆಗಳನ್ನೂ ಕಳೆದುಕೊಂಡಿದ್ದಾರೆ. ಸವಾಲಿನ ಜೀವನ ಮುನ್ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೂ ಧಕ್ಕೆಯಾಗುವ ಅಪಾವಿದೆ. ವಿವಿಧ ರೀತಿಯ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ – ಜನಜೀವನವಲ್ಲ, ಇದು ಜಲಜೀವನ
ಇಂತಹ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಂತ್ರಸ್ತರ ನೆರವಿಗೆ ಮುಂದಾಗಿದೆ. ಐಎಂಎ ಬೆಳಗಾವಿಯ ನಿಯೋಜಿತ ಅಧ್ಯಕ್ಷ ಡಾ.ಅನಿಲ ಪಾಟೀಲ ಪ್ರಗತಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ ಒಂದು ತಿಂಗಳ ಕಾಲ ಸಂತ್ರಸ್ತರಿಗೆ ಉಚಿತ ಆರೋಗ್ಯ ನೆರವು ನೀಡಲು ಐಎಂಎ ನಿರ್ಧರಿಸಿದೆ. ಅಗತ್ಯವಿರುವ ಕಡೆ ತೆರಳಿ ಆರೋಗ್ಯ ತಪಾಸಣೆ ನಡೆಸುವುದಲ್ಲದೆ ಬೇಕಾದ ಔಷಧಗಳನ್ನೂ ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಾಗಲೆ ಬೇಕಾದಷ್ಟು ಔಷಧಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ನಿರಂತರವಾಗಿ ವೈದ್ಯಕೀಯ ನೆರವು ನೀಡಲು ನಾವು ಸಿದ್ದರಿದ್ದೇವೆ. ನಂಮ್ಮ ಸಂಘದ ಸದಸ್ಯರನ್ನು ಸಂಪರ್ಕಿಸಿದರೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡುತ್ತೇವೆ ಎಂದು ಅನೀಲ ಪಾಟೀಲ ತಿಳಿಸಿದರು. ಸಂತ್ರಸ್ತರ ಕೇಂದ್ರಗಳ ಜವಾಬ್ದಾರಿ ಹೊತ್ತವರು ಇದರ ಸದುಪಯೋಗಪಡೆಯಬಹುದು.
ಸಂಪರ್ಕಿಸಬೇಕಾದ ವೈದ್ಯರು ಹಾಗೂ ಸಂಪರ್ಕ ಸಂಖೆಯ -ಡಾ.ರಾಜಶ್ರೀ ಅನಗೋಳ (9448157444), ಡಾ.ವಿವೇಕಿ (9845143860), ಡಾ.ಅನಿಲ ಪಾಟೀಲ (9448120250).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ