Belagavi NewsBelgaum NewsKarnataka News

*ನಾ ಪಾಸ್ ಆದ್ರೆ ಅವಳು ನನ್ನ ಲವ್ ಮಾಡ್ತಾಳೆ: ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಈ ವರ್ಷ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಮುಕ್ತಾಯ ಹಂತದಲ್ಲಿ ಇದ್ದು, ಈ ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.‌ 

ಉತ್ತರ ಪತ್ರಿಕೆ ಮೌಲ್ಯಮಾಪನ ಹಿನ್ನಲೆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪಾಸ್‌ ಮಾಡುವಂತೆ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಈ ಅಚ್ಚರಿ ಉತ್ತರ ಪತ್ರಿಕೆಗಳು ಲಭ್ಯವಾಗಿವೆ.

ಸರ್, ನನ್ನನ್ನು ಪಾಸ್ ಮಾಡಿ ನಾನು ಎಸ್ಎಸ್ಎಲ್ಸಿಯಲ್ಲಿ ಪಾಸಾದರೆ ಮಾತ್ರ ನನ್ನ ಹುಡುಗಿ ನನ್ನನ್ನ ಲವ್ ಮಾಡ್ತೀನಿ ಅಂತಾ ಹೇಳಿದ್ದಾಳೆ. ಈ ಐದು ನೂರು ರೂ, ಟೀ ಕುಡೀರಿ ನನ್ನ ಪಾಸ್ ಮಾಡಿ ಪ್ಲೀಸ್… ಅಂತಾ ಬೇಡಿಕೊಂಡಿರುವ ಉತ್ತರ ಪತ್ರಿಕೆ ಬೆಳಕಿಗೆ ಬಂದಿದೆ.

ಅಷ್ಟೆ ಅಲ್ಲದೇ ಮತ್ತೇರಡು ಉತ್ತರ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು, ನನ್ನನ್ನ ಪಾಸ್ ಮಾಡಿದ್ರೆ ಹಣ ಕೊಡ್ತೀನಿ, ನಾನು ಪಾಸಾದರೆ ನನ್ನ ತಂದೆ ತಾಯಿ ನನ್ನನ್ನ ಕಾಲೇಜಿಗೆ ಕಳಿಸ್ತಾರೆ ಇಲ್ಲಾಂದ್ರೆ ಕಳಿಸಲ್ಲ ಎಂದು ಬರೆದ ಪ್ರತಿಗಳು ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button