ಕ್ರಮವಾಗದಿದ್ದರೆ ಸೋಮವಾರ ಹೈಕೋರ್ಟ್ ಮೆಟ್ಟಿಲೇರುತ್ತೇವೆ – ವಕೀಲ ಜಗದೀಶ್ ಹೇಳಿಕೆ
ಸರಕಾರವನ್ನೇ ಉರುಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದಾಖಲಾಗಿರುವ ಎಫ್ಐಆರ್ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸೋಮವಾರ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸಿಡಿ ಯುವತಿ ಪರ ವಕೀಲ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ರಮೇಶ ಜಾರಕಿಹೊಳಿ ತಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಸರಕಾರಕ್ಕೇ ಬೆದರಿಕೆ ಹಾಕುತ್ತಿದ್ದಾರೆ. ಸರಕಾರವನ್ನೇ ಉರುಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹಾಗಾಗಿ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ನನ್ನ ಮೇಲೆ ಕ್ರಮ ಕೈಗೊಂಡರೆ ನಿಮ್ಮ ಟೇಬಲ್ ಮೇಲೆ ರಾಜಿನಾಮೆ ಪತ್ರಗಳ ರಾಶಿ ಬೀಳುತ್ತದೆ ಎಂದು ರಮೇಶ ಜಾರಕಿಹೊಳಿ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಆರೋಪಿಯನ್ನು ಎನ್ ಕೌಂಟರ್ ಮಾಡಿದಾಗ ಜನ ಸಂಭ್ರಮಿಸಿದ್ದಾರೆ. ಆದರೆ ಇಲ್ಲಿ ಆರೋಪಿ ಗೃಹ ಮಂತ್ರಿಯನ್ನು ಭೇಟಿಯಾಗುತ್ತಾರೆ ಎಂದು ಜಗದೀಶ್ ಗಂಭೀರ ಆರೋಪ ಮಾಡಿದರು.
ಈ ಮಧ್ಯೆ, ರಮೇಶ ಜಾರಕಿಹೊಳಿ ಇಂದು ಸಂಜೆ ಬಾಂಬ್ ಹಾಕುವುದಾಗಿ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದ್ದು, ಪ್ರಕರಣ ಮತ್ತೆ ಯಾವ ರೀತಿಯ ಟ್ವಿಸ್ಟ್ ಪಡೆಯಲಿದೆ ಎನ್ನುವ ಪ್ರಶ್ನೆ ಎದುರಾಗಿದೆ.
ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಕ್ಕೆ ಸಿಡಿ ಲೇಡಿ ಸ್ಪಷ್ಟನೆ
ನಾಳೆ 4ರಿಂದ 6 ಗಂಟೆವರೆಗೂ ‘ಮಹಾ’ ಬಾಂಬ್ ಇದೆ ಎಂದ ರಮೇಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ