Latest

ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಕ್ಕೆ ಸಿಡಿ ಲೇಡಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಸಿಡಿ ಲೇಡಿ ಮನೆಯವರ ಜೊತೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಕ್ಕೆ ಸ್ಪಷ್ಟನೆ ನೀಡಿದ್ದಾಳೆ.

ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೆವು. ಆದರೆ ಅವರ ಭೇಟಿ ಸಾಧ್ಯವಾಗಿಲ್ಲ. ವಿಡಿಯೋ ಗ್ರಾಫಿಕ್ಸ್ ಎಂದು ಹೇಳಿದ್ದರ ಬಗ್ಗೆಯೂ ಸ್ಪಷ್ಟನೆ ನೀಡಿರುವ ಯುವತಿ, ಕುಟುಂಬಸ್ಥರು ಅಳುತ್ತಿದ್ದರು. ಹೀಗಾಗಿ ಸಮಾಧಾನ ಮಾಡಿದ್ದೆ. ಅವರ ಅಳು ಕೇಳಿ ಡಿಕೆಶಿ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದೆ ಎಂದು ತಿಳಿಸಿದ್ದಾಳೆ.

Home add -Advt

ಇದೇ ವೇಳೆ ನಮ್ಮ ಅಪ್ಪ-ಅಮ್ಮ, ಅಜ್ಜಿ ಹಾಗೂ ಇಬ್ಬರು ಸಹೋದರರು ಎಲ್ಲಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ, ಅವರಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ. ಅವರು ನನ್ನ ಎದುರು ಇದ್ದರೆ ಮಾತ್ರ ನಾನು ಬಂದು ಎಸ್ ಐಟಿ ಮುಂದೆ ಹೇಳಿಕೆ ನೀಡುತ್ತೇನೆ. ನನಗೆ ನನ್ನ ಕುಟುಂಬದವರ ರಕ್ಷಣೆ ಮುಖ್ಯ. ಇನ್ನು ನಾನು ಸುರಕ್ಷಿತವಾಗಿದ್ದು, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ಹೇಳಿದ್ದಾಳೆ.

ನಾಳೆ ಎನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ತಕ್ಷಣ ನನ್ನ ಅಪ್ಪ-ಅಮ್ಮ, ಅಜ್ಜಿ ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡುಬಂದು ರಕ್ಷಣೆ ನೀಡಿ ಎಂದು ಎಸ್ ಐಟಿಗೆ ಮನವಿ ಮಾಡಿದ್ದಾಳೆ.

ಸಿಡಿ ಕೇಸ್ ಗೆ ಮತ್ತೊಂದು ಟ್ವಿಸ್ಟ್: ಆಡಿಯೋದಲ್ಲಿ ನಾಯಕರೊಬ್ಬರ ಹೆಸರು ಪ್ರಸ್ತಾಪಿಸಿದ ಯುವತಿ

Related Articles

Back to top button