Belagavi NewsBelgaum NewsKannada NewsKarnataka NewsLatest

*ಸಮಾಜವು ಆರೋಗ್ಯಯುತವಾಗಿದ್ದರೆ ದೇಶದ ಬೆಳವಣಿಗೆ ಸಾಧ್ಯ -ಸೂರಜ್ ಶಂಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಸಂವಿಧಾನವು ನಮಗೆ ನೀಡಿರುವ ಸಮಾನತೆಯಿಂದಾಗಿ ಎಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸುತ್ತಿದ್ದೇವೆ. ದೇಶದಲ್ಲಿ ಆರೋಗ್ಯ ಕ್ಷೇತ್ರವು ಬಹುಮುಖ್ಯವಾಗಿದ್ದು, ಸಾಮಾಜಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸಮಾಜವು ಆರೋಗ್ಯಯುತವಾಗಿದ್ದರೆ ದೇಶದ ಬೆಳವಣಿಗೆ ಸಾಧ್ಯ ಆದ್ದರಿಂದ ಆರೋಗ್ಯ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸಾಂಬ್ರಾ ಏರಮನ ತರಬೇತಿ ಶಾಲೆಯ ವಾಯುಸೇನಾ ಮೆಡಲ್ ವಿಜೇತ ಏರ ಕಮಾಂಡರ ಸೂರಜ ಶಂಕರ ಹೇಳಿದರು.

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. 26 ಜನೇವರಿ 2025 ರಂದು 76ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಆಸ್ಪತ್ರೆಗಳು ಹಾಗೂ ಆರೋಗ್ಯ ರಕ್ಷಣೆಯಲ್ಲಿ ಆರ್ಥಿಕತೆ ಬಹಳ ಮುಖ್ಯವಾಗಿದೆ. ಆಸ್ಪತ್ರೆಗಳು ಸಮಾಜದ ಬಹುಮುಖ್ಯ ಮತ್ತು ಅತ್ಯುತ್ತಮವಾದ ಭಾಗ. ವೈದ್ಯವಿಜ್ಞಾನದಿಂದ ಇಂದು ಬಹಳ ಅನುಕೂಲವಾಗಿದೆ. ಇಂದು, ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ದುರ್ಬಲರನ್ನು ಸಬಲರನ್ನಾಗಿ ಮಾಡುವ ಶಕ್ತಿಯನ್ನು ಸಂವಿಧಾನವು ನಮಗೆ ಕೊಡಮಾಡಿದೆ. ದೇಶದ ಆರ್ಥಿಕತೆಯನ್ನು ಪ್ರಬಲವನ್ನಾಗಿ ಮಾಡಲಾಗುತ್ತಿದ್ದು, ಜಗತ್ತಿನ ಮೂರನೇ ದೊಡ್ಡ ಆರ್ಥಿಕ ದೇಶವಾಗಿ ಹೊರಮ್ಮುತ್ತಿದೆ. ಕೈಗಾರಿಕೋದ್ಯಮದಲ್ಲಿ ಸಾಕಷ್ಟು ಸವಾಲಗಳಿದ್ದವು, ಅವುಗಳನ್ನು ಎದುರಿಸುವ ಶಕ್ತಿ ನಮಗೆ ಬಂದಿದೆ. ಅದಕ್ಕಾಗಿ ಸೂಕ್ತ ವಾತಾವರಣವನ್ನು ನಿರ್ಮಿಸಿರುವದು ಎತ್ತಿ ತೋರುತ್ತದೆ ಎಂದರು.

ಮಹತ್ವಾಕಾಂಕ್ಷೆಯಿಂದ ನಾವು ಪರಸ್ಪರ ಅವಲಂಬಿತರಾಗಿರಬಹುದು. ಮಾನವೀಯತೆಯ ಮನಸ್ಸುಗಳ ಸಾಮರ್ಥ್ಯವನ್ನು ಬೆಳಗಿಸುವುದು. ವಿವಿಧ ಸ್ಥಳಗಳಿಂದ ಆಗಮಿಸಿದರೂ ಕೂಡ ಸಾಂಸ್ಕೃತಿಕವಾಗಿ ಒಟ್ಟಿಗೆ ಒಟ್ಟಿಗಿರುವದು ಅದ್ಭುತ. ನಮಗೆ ಸುಂದರವಾದ ದೃಷ್ಟಿ ಬೇಕು, ಈಗಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಬೇಕಾಗಿದೆ. ಆದ್ದರಿಂದ ಯುವಜನಾಂಗ ಸಂವಿಧಾನದ ಆಶಯಗಳಿಗೆ ಬದ್ದರಾಗಿ ದೇಶದ ಅಭಿವೃದ್ದಿಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಕಾಹೆರ ಉಪಕುಲಪತಿ ಪ್ರೊ. ನಿತಿನ ಗಂಗಣೆ ಅವರು ಮಾತನಾಡಿ, ಆರೋಗ್ಯ ಸೇವೆ ಇಂದು ಮಹುಮುಖ್ಯ ಸೇವಾ ಕಾರ‍್ಯವಾಗಿದ್ದು, ನಾವೆಲ್ಲರೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಬದ್ದರಾಗಿರೋಣ. ಆರೋಗ್ಯಯುತ ಸಮಾಜವೇ ನಮ್ಮ ಗುರಿಯಾಗಿರಲಿ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ಶಸ್ತ್ರಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಾದ ರೊಬೊಟಿಕ್ ಅಳವಡಿಸಿಕೊಂಡಿದ್ದು, ಇಲ್ಲಿಯವರೆಗೆ 14 ಹೃದಯ, 16 ಲೀವರ(ಯಕೃತ) ಹಾಗೂ 93 ಕಿಡ್ನಿ ಕಸಿ ಮಾಡಲಾಗಿದೆ ಎಂದ ಅವರು, ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಸಲ್ಲಿಸುತ್ತ, ಸರಳತೆ, ಕಾಳಜಿಯಿಂದ ರೋಗಿಗಳಿಗೆ ಸೇವೆಸಲ್ಲಿಸಲು ನಾವೆಲ್ಲರೂ ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ ಎಂದು ಸಲಹೆ ನೀಡಿದರು.

ಆಸ್ಪತ್ರೆಯು ಪ್ರಕಟಿಸುವ ಲೈಫ್ ಲೈನ್, ಫೋಕಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆ ಮೇಲೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಹಾಗೂ ಮುಖ್ಯಕಾರ‍್ಯನಿರ್ವಾಹಕರಾದ ಡಾ. ಎಂ. ವಿ. ಜಾಲಿ, ಡಾ. ವಿ ಡಿ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button