Latest

ಇದೇನು ಏಕ ಚಕ್ರಾಧಿಪತ್ಯವೇ? -ಸಿದ್ದರಾಮಯ್ಯ ಟ್ವೀಟ್

ಇದೇನು ಏಕ ಚಕ್ರಾಧಿಪತ್ಯವೇ? -ಸಿದ್ದರಾಮಯ್ಯ ಟ್ವೀಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಿಡಿ ಕಾರಿದ್ದು, ಮುಖ್ಯಮಂತ್ರಿಯಾಗಲು ತೋರಿದ ಆತುರವನ್ನು ಸಚಿವಸಂಪುಟ ರಚಿಸಲು ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ರಾಜ್ಯಪಾಲರ ವಿರುದ್ಧವೂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಇದೇನು ಏಕಚಕ್ರಾಧಿಪತ್ಯವೇ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಯಡಿಯೂರಪ್ಪ ತೋರಿದ ಆತುರವನ್ನು ಸಚಿವಸಂಪುಟ ರಚನೆಗೆ ತೋರುತ್ತಿಲ್ಲವೇಕೆ? ಅತಿವೃಷ್ಟಿ, ಅನಾವೃಷ್ಟಿಯಿಂದ ರಾಜ್ಯದ ಜನತಯ ಬವಣೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Home add -Advt

ಅತಿವೃಷ್ಟಿ -ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಚಿವಸಂಪುಟ ವಿಸ್ತರಣೆಯದ್ದೇ ಎಂದು ಸಿದ್ರಾಮಯ್ಯ ಪ್ರಶ್ನಿಸಿದ್ದಾರೆ.

ಜೊತೆಗೆ, ವಿಶ್ವಾಸಮತ ಯಾಚಿಸುವಂತೆ ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದ ರಾಜ್ಯಪಾಲರಿಗೆ ಸಚಿವರಿಲ್ಲದೆ ರಾಜ್ಯದ ಜನರು ಪಡುತ್ತಿರುವ ಬವಣೆ ಕಾಣುತ್ತಿಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

Related Articles

Back to top button