
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಕೇಸ್ ನಲ್ಲಿ ಐಐಟಿ ಬಾಬಾರನ್ನು ರಾಜಸ್ಥಾನದ ಜೈಪುರದ ಲಾಡ್ಜ್ ವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. ಐಐಟಿ ಬಾಬಾ ಅಭಯ್ ಸಿಂಗ್ ವಿರುದ್ಧ ಗಾಂಜಾ ಸೇವನೆ ಕೇಸ್ ಪ್ರಕರಣ ದಾಖಲಾಗಿತ್ತು. ಇದೀಗ ಎನ್ ಡಿ ಪಿಎಸ್ ಆಕ್ಟ್ ಅಡಿ ಬಂಧಿಸಲಾಗಿದೆ.
ಅಭಯ್ ಸಿಂಗ್ ಬಾಂಬೆ ಐಐಟಿ ಹಳೇ ವಿದ್ಯಾರ್ಥಿಯಾಗಿದ್ದು, ಬಳಿಕ ಆಧ್ಯಾತ್ಮದತ್ತ ಒಲವು ಹೊಂದಿ ನಾಗಾಸಾಧುವಾಗಿ ದೀಕ್ಷೆ ಪಡೆದುಕೊಂಡಿದ್ದರು. ಈ ಬಾರಿಯ ಮಹಾಕುಂಭ ಮೇಳದಲ್ಲಿ ಐಐಟಿ ಬಾಬಾ ಎಂದೇ ಗಮನ ಸೆಳೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ