*ಐಐಟಿ ಬಾಂಬೆಯಿಂದ ರಾಣಿ ಚನ್ನಮ್ಮ ವಿವಿಗೆ ಎಮರ್ಜಿಂಗ್ ಯೂನಿವರ್ಸಿಟಿ ಅವಾರ್ಡ್*

ಪ್ರಗತಿವಾಹಿನಿ ಸುದ್ದಿ: ಐಐಟಿ ಬಾಂಬೆ (FOSSE GIS, NMEICT) 2 ಇವರ ವತಿಯಿಂದ ಎರ್ಪಡಿಸಿದ National Geospatial Awards 2025 (Edition 02) ಆಯ್ಕೆ ಸಮಿತಿಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ “Emerging University Award”, ಎಂದು ಘೋಷಿಸಲಾಗಿದೆ ಎಂದು ಐಐಟಿ, ಬಾಂಬೆ ತಿಳಿಸಿದೆ.
ಆಯ್ಕೆ ಸಮಿತಿಯು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿ, ವಿಶ್ವವಿದ್ಯಾಲಯದ ಪರವಾಗಿಯೂ ಮತ ಚಲಾಯಿಸಿರುತ್ತಾರೆ. ಈ ಪ್ರಶಸ್ತಿಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು FOSSEE GIS ಯೋಜನೆಯ ವಿವಿಧ ಶಿಬಿರ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಈ ಪ್ರಶಸ್ತಿಯನ್ನು ಇದೆ 17 ರಂದು ಐಐಟಿ, ಬಾಂಬೆಯಲ್ಲಿ ನಡೆಯಲಿರುವ Open Source GIS Day ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯಕ್ಕೆ “Emerging Unviersity Award” ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಮುಂದುವರೆದು, ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಬಗಾಡೆ, ಭೂಗೋಳಶಾಸ್ತ್ರ ವಿಭಾಗ ಇವರನ್ನು ಸದರಿ ಪ್ರಶಸ್ತಿ ಸಮಿತಿಯು “National Geospatial Emerging Faculty Fellow Award” ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಈ ಕಾರ್ಯಕ್ರಮದ ಮಖ್ಯ ಅತಿಥಿಗಳಾಗಿ ಇಸ್ರೋದ ಮಾಜಿ ಅಧ್ಯಕ್ಷರಾದ ಕಿರಣ ಕುಮಾರ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.