
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ ನಗರದಲ್ಲಿ ಇಬ್ಬರು ಆರೋಪಿಗಳು ಅಕ್ರಮವಾಗಿ ಗೋವಾ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.
ಮಾರ್ಕೇಟ ಪೊಲೀಸ್ ಠಾಣೆಯ ಪಿಐ ನೇತೃತ್ವದಲ್ಲಿ ಪಿಎಸ್ಐ ವಿಠಲ ಹಾವನ್ನವರ ಮತ್ತು ಸಿಬ್ಬಂದಿ ದಾಳಿ ಮಾಡಿ ಮಂಜುನಾಥ ಮಲಗೌಡ ಗಿಡಗೇರಿ ಹಾಗೂ ಯತಿರಾಜ ರಾಮಚಂದ್ರ ಪರದೆ ಎಂಬಾತನನ್ನು ಬಂಧಿಸಿದ್ದಾರೆ.
ಮದ್ಯ ಸಾಗಾಟದ ವೇಳೆ ಆರೋಪಿಗಳು ಸಿಕ್ಕಿದ್ದು, ಪೊಲೀಸರು ವಿಚಾರಣೆ ಮಾಡಿದಾಗ ಅವರು ಸರಾಯಿ ಬಾಟಲಿಗಳನ್ನು ಶಹಾಪೂರ ಮಹಾತ್ಮಾ ಪುಲೆ ರೋಡ, ಹುಲಬತ್ತಿ ಕಾಲೋನಿಯಲ್ಲಿನ ಒಂದು ರೂಮಿನಲ್ಲಿ ಇಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ವೇಳೆ ಪರಿಶೀಲನೆ ಮಾಡಿದಾಗ 50 ಸಾವಿರ ಬೆಲೆಯ ಒಟ್ಟು 128 ಲೀ. 250 ಮೀ.ಲೀ. ಸಾರಾಯಿ, 50,680/- ರೂ ಹಾಗೂ ಬೈಕ್ ಜಪ್ತ ಮಾಡಿ ಆರೋಪಿಗಳನ್ನು ದಸ್ತಗೀರ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ದಾಳಿಯಲ್ಲಿ ಪಾಲ್ಗೊಂಡ ಪೊಲೀಸ ಅಧಿಕಾರಿಗಳಾದ ಪಿಐ ಮಹಾಂತೇಶ ಧಾಮಣ್ಣವರ ಹಾಗೂ ಪಿಎಸ್ಐ ವಿಠಲ ಹಾವನ್ನವರ, ಸಿಬ್ಬಂದಿಗಳಾದ ಎಸ್ ಬಿ. ಖಾನಾಪೂರೆ, ಎಲ್ ಎಸ್ ಕಡೋಲ್ಕರ, ನವೀನಕಮಾರ ಎ. ಬಿ. ಅಸೀರಅಹಮ್ಮದ ಜಮಾದಾರ ಸುರೇಶ ಕಾಂಬಳೆ, ಚಿಕ್ಕಣ್ಣ ಕೇರನಾಯಿಕ, ಮಹಾಂತೇಶ ಹರೋಲಿ, ಕಾರ್ತಿಕ ಜಿ ಎಮ್ ರವರ ಕಾರ್ಯದಕ್ಷತೆಯನ್ನು ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
					
				
					
					
					
					
					
					
					


