Latest

ಅಕ್ರಮ ಶ್ರೀಗಂಧ ಸಾಗಾಟ; ಯುವಕನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲೂಕಿನ ಕಸಬಾ ನಂದಗಡ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.

ಆನಂದ ಮಾರುತಿ ರಾಮಣ್ಣವರ (25) ಬಂಧಿತ ಆರೋಪಿ. ಈತ ಶ್ರೀಗಂಧದ ಗಿಡವನ್ನು ಕಡಿದು ಅದರ ತುಂಡುಗಳನ್ನು ಸರ್ಕಾರದ ಯಾವುದೇ ಪಾಸ್, ಪರ್ಮಿಟ್, ಲೈಸನ್ಸ್ ಯಾವುದೂ ಇಲ್ಲದೆ ತನ್ನ ವಶದಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಸಾಗಿಸುವ ಯತ್ನದಲ್ಲಿದ್ದ.

ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ನಂದಗಡ ಪೊಲೀಸ್ ಠಾಣೆಯ ಪಿಐ ಬಸವರಾಜ ಬಿ ಲಮಾಣಿ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಎಚ್. ಶ್ರೀನಿವಾಸನ್, ಸಿಬ್ಬಂದಿ ಎನ್. ಬಿ.ಬೆಳವಡಿ, ಎಂ.ಎಂ.ಮುಲ್ಲಾ, ಯು.ಬಿ. ಶಿಂತ್ರಿ ಅವರು ದಾಳಿ ಮಾಡಿ ಆರೋಪಿ ಕಡೆಯಿಂದ ಶ್ರೀಗಂಧದ ಕಟ್ಟಿಗೆಯ ತುಂಡುಗಳನ್ನು ಜಪ್ತು ಮಾಡಿದ್ದಾರೆ. ವಿಚಾರಣೆ ಮುಂದುವರಿದಿದೆ.

https://pragati.taskdun.com/kpcc-president-d-k-shivakumar-visit-belagavi-today/
https://pragati.taskdun.com/north-korea-has-a-terrible-weapon-america-can-be-reached-in-33-minutes/
https://pragati.taskdun.com/arrest-warrant-issued-by-the-international-criminal-court-for-the-arrest-of-russian-president-putin/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button