*ವಿದ್ಯುತ್ ಪ್ರವಹಿಸಿ ತಾಯಿ ಹಾಗೂ ಇಬ್ಬರು ಮಕ್ಕಳ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಚಿಂಚೋಳಿ: ಕರೆಂಟ್ ಶಾಕ್ ನಿಂದ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯ ದನಗರಗಲ್ಲಿಯಲ್ಲಿ ನಡೆದಿದೆ.

ಝರಣಮ್ಮ ಅಂಬಣ್ಣ ಹಾಗೂ ಮಕ್ಕಳಾದ ಸುರೇಶ್ (17) ಹಾಗೂ ಮಹೇಶ್ (18) ಮೃತ ದುರ್ದೈವಿಗಳು. ನಿನ್ನೆ ಸುರಿದ ಭಾರಿ ಮಳೆಗೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದಿತ್ತು. ಇದನ್ನು ತಿಳಿಯದೇ ತಂತಿ ತುಳಿದಿದ್ದಾರೆ. ನೀರಿನಲ್ಲಿ ಬಿದ್ದಿದ್ದ ತಂತಿಯಿಂದ ವಿದ್ಯುತ್ ಹರಿದು ಮೂವರು ಸಾವನ್ನಪ್ಪಿದ್ದಾರೆ.

Home add -Advt

ದನಗಳಿಗೆ ಮೇವು ತರಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

Related Articles

Back to top button