*ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ; ಅಪಾರ ಪ್ರಮಾಣದ ಸಾರಾಯಿ ಜಪ್ತಿ*
ಪ್ರಗತಿವಾಹಿನಿ ಸುದ್ದಿ: ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಸರಾಯಿ ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಮಾರು 25 ಬ್ಯಾರೆಲ್, 10 ಅಲ್ಯೂಮಿನಿಯಂ ಪಾತ್ರೆಗಳನ್ನ ಜಪ್ತು ಪಡಿಸಿಕೊಂಡಿದ್ದು ಅಲ್ಲದೆ ಸುಮಾರು 11 ಲಕ್ಷದ ಮೌಲ್ಯದ 5700 ಲೀಟರ್ ನಷ್ಟು ಬೆಲ್ಲದ ಕೊಳೆಯನ್ನು ನಾಶ ಪಡಿಸಲಾಗಿದೆ. ಇದೆಲ್ಲವನ್ನೂ ತಯಾರಿ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 40ಲೀ.ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ಮನೆಗಳಿಂದ, ಬಯಲಿನಲ್ಲಿ ಹಾಗೂ ನಾಲೆಯ ಕಡೆಯಲ್ಲಿ ಶೇಖರಣೆ ಮಾಡಿರುವುದನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಸಿದ್ರಾಯಿ ರಾಜಕಟ್ಟಿ, ಶೆಟ್ಟೆವ್ವ ರಾಜಕಟ್ಟಿ, ಸಿದ್ದಪ್ಪ ಪನಗುದ್ದಿ, ಬಾಳಪ್ಪ ಮುಚ್ಚಂಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇಂದು ಬೆಳಿಗ್ಗೆ 6:00 ಗಂಟೆಗೆ ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಎಸ್.ಎನ್.ಸಿದ್ದರಾಮಪ್ಪ ಐಪಿಎಸ್.,ರವರ ನೇತೃತ್ವದಲ್ಲಿ ರೋಹನ ಜಗದೀಶ ಐಪಿಎಸ್.,ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ, ಎಸಿಪಿ ಅಪರಾಧ ವಿಭಾಗ, ಎಸಿಪಿ ಬೆಳಗಾವಿ ಗ್ರಾಮೀಣ ಉಪ ವಿಭಾಗ ಹಾಗೂ ಪಿಐ ಸಿಸಿಬಿ,ಕಾಕತಿ,ಹಿರೇಬಾಗೇವಾಡಿ, ಬೆಳಗಾವಿ ಗ್ರಾಮೀಣ ಹಾಗೂ ಆರ್‌ಪಿಐ ಎಂಟಿಓ ರವರೊಂದಿಗೆ ಸಿಎಆರ & ಗ್ರಾಮೀಣ ಉಪ ವಿಭಾಗದ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಈ ದಾಳಿ ನಡೆಸಿದ್ದರು.
ಈ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು 25000 ಬಹುಮಾನ ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ