Kannada NewsKarnataka NewsLatest
*ಕಸ ಬಿಸಾಕಲು ಹೋಗಿದ್ದ ಯುವತಿಗೆ ಲೈಂಗಿಕ ಕಿರುಕುಳ; ನಾಲ್ವರು ಆರೋಪಿಗಳು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಕಸ ಬಿಸಾಕಲು ಮನೆಯಿಂದ ಹೊರ ಹೋಗಿದ್ದ ಯುವತಿಗೆ ಪುಂಡರ ಗುಂಪು ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಪುಂಡರ ಗುಂಪು ಕಿರುಕುಳ ನೀಡಿದ್ದು, ಫೆ.18ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಯುವತಿ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಸ ಬಿಸಾಕಲೆಂದು ಯುವತಿ ತನ್ನ ಸ್ನೇಹಿತನ ಜೊತೆ ಹೋದ್ದ ವೇಳೆ ಪುಂಡರ ಗುಂಪು ಯುವತಿಗೆ ಕಿರುಕುಳ ನೀಡಿದೆ. ತಪ್ಪಿಸಲು ಬಂದ ಸ್ನೇಹಿತನನ್ನು ಥಳಿಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ