Latest

ಸರಕಾರವೇ ರಾಜ್ಯ ಒಡೆಯಲು ಹೊರಟಂತಿದೆ -ಕೋರೆ ಆಕ್ರೋಶ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಲು ಹೊರಟಿರುವುದು ಸರಕಾರವೇ ರಾಜ್ಯವನ್ನು ಒಡೆಯಲು ಕುಮ್ಮಕ್ಕು ನೀಡುವಂತಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಪ್ರಗತಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಭಾಗ ಜನರು ರಾಜ್ಯ ಒಡೆಯ ಬಾರದು. ಅಖಂಡ ಕರ್ನಾಟಕ ಉಳಿಯಬೇಕು ಎನ್ನುವ ಭಾವನೆಯಲ್ಲಿದ್ದರೆ ಸರಕಾರವೇ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುವ ಮೂಲಕ ರಾಜ್ಯ ಒಡೆಯಲು ಹೋರಾಟ ಮಾಡಲು ಪ್ರೇರೇಪಣೆ ನೀಡುತ್ತಿದೆ ಎಂದು ಹೇಳಿದರು. 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದೇಶದ ಮೊದಲ ತಾಂತ್ರಿಕ ವಿಶ್ವವಿದ್ಯಾಲಯ. ಇದನ್ನು ಮಾದರಿಯಾಗಿಟ್ಟುಕೊಂಡು ದೇಶದ ವಿವಿಧೆಡೆ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಅಂತಹ ವಿವಿಯನ್ನೇ ಸರಕಾರ ಒಡೆಯಲು ಹೊರಟಿದೆ. ತಮ್ಮ ಊರು ಉದ್ದಾರ ಮಾಡಲು ರಾಜ್ಯವನ್ನೇ ಒಡೆಯುವುದು ಸರಿಯಲ್ಲ. ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕೋರೆ ಆಗ್ರಹಿಸಿದರು. 

ಈ ಭಾಗದಲ್ಲಿರುವ ಪ್ರಭಲ ಸಂಸ್ಥೆಗಳನ್ನೆಲ್ಲ ಕಿತ್ತುಕತೊಂಡು ಅಶಕ್ತ, ದುರ್ಬಲ ಸಂಸ್ಥೆಗಳನ್ನು ಇಲ್ಲಿಗೆ ನೀಡಲಾಗುತ್ತಿದೆ. ಸರಕಾರ ತಕ್ಷಣ ಇಂತಹ ಕ್ರಮದಿಂದ ಹಿಂದೆ ಸರಿಯಬೇಕು. ಜನರನ್ನು ಕೆಣಕುವ ಸಾಹಸಕ್ಕೆ ಮುಂದಾಗಬಾರದು ಎಂದೂ ಅವರು ಹೇಳಿದರು. 

Related Articles

Back to top button