*ಭಾಷಾ ಅಲ್ಪಸಂಖ್ಯಾತ ಆಯೋಗದ ಆದೇಶವನ್ನು ಜಾರಿಗೊಳಿಸಿ: MES ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾಷಾ ಅಲ್ಪಸಂಖ್ಯಾತರ ಆಯೋಗದ ಆದೇಶವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಮಹಾರಾಷ್ಟ್ರ ಏಕೀಕರಣ ಸಮೀತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿದೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿ ಮೋಹಮ್ಮದ ರೋಷನ್ ಅವರಿಗೆ ಮನವಿ ಸಲ್ಲಿಸಿದ ಅವರು, ಕನ್ನಡದೊಂದಿಗೆ ಮರಾಠಿ ಭಾಷೆಯಲ್ಲಿಯೂ ಪತ್ರಗಳು ನೀಡಬೇಕು. ಜೊತೆಗೆ ಮರಾಠಿಯಲ್ಲಿ ಫಲಕಗಳನ್ನು 15 ದಿನದೊಳಗಾಗಿ ಅಳವಡಿಸಿಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದ್ರು.
ಮನವಿ ಸ್ವೀಕರಿಸಿದ ಡಿಸಿ ಮೊಹ್ಮದ್ ರೋಷನ್ ಅವರು, ಯಾರಿಗೂ ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದರು.
ಅಮರ್ ಯಳ್ಳೂರಕರ ಅವರು ಮಾತನಾಡಿ, ಕನ್ನಡ ಅನುಷ್ಠಾನ ಸಮಿತಿಯ ಸಭೆಯ ಬಳಿಕ ಸ್ಥಳೀಯ ಸಂಸ್ಥೆಗಳು ಅಲ್ಪ ಸಂಖ್ಯಾತರ ಆಯೋಗದ ಆದೇಶವನ್ನು ಮರೆತು ಕಾನೂನುಬಾಹಿರವಾಗಿ ಕನ್ನಡ ಕಡ್ಡಾಯವನ್ನು ಜಾರಿಗೊಳಿಸಿದೆ. ಕಾನೂನು ಬಾಹಿರ ಆದೇಶ ಜಾರಿಗೊಳಿಸಿರುವ ಬೆಳಗಾವಿ ಮಹಾಪಾಲಿಕೆ ಆಯುಕ್ತರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮನೋಹರ ಕಿಣೇಕರ ಭಾಷಿಕ ಅಲ್ಪಸಂಖ್ಯಾತರ ಸಭೆಯಲ್ಲಿ ಬೆಳಗಾವಿ ಜಿಲ್ಲಾಡಳಿತವು ಅಲ್ಪಸಂಖ್ಯಾತರ ಕಾನೂನಿನ ಪ್ರಕಾರ ಬೆಳಗಾವಿಯಲ್ಲಿ ಎರಡು ಭಾಷೆಯಲ್ಲಿ ಕಾಗದಪತ್ರಗಳನ್ನು ನೀಡಲು ಮತ್ತು ಫಲಕಗಳನ್ನು ಅಳವಡಿಸಲು ಒಪ್ಪಿಕೊಂಡಿತ್ತು. ಆದರೇ, ಈಗ ತನ್ನ ನಿರ್ಣಯದಿಂದ ಹಿಂದೆ ಸರಿದು ಇಬ್ಬಗೆಯ ನೀತಿಯನ್ನು ತಳೆದಿದೆ. ಮುಂಬರುವ 10-15 ದಿನಗಳಲ್ಲಿ ಅಲ್ಪಸಂಖ್ಯಾತ ಆಯೋಗದ ಆದೇಶವನ್ನು ಜಾರಿಗೊಳಿಸಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು. ಅಲ್ಲದೇ, ಮರಾಠಿ ಭಾಷಿಕರಿಗೆ ವಿನಾ ಕಾರಣ ತೊಂದರೆ ನೀಡುವ ಪ್ರತಿಭಟನಾಕಾರರಿಗೆ ಪೊಲೀಸ್ ಇಲಾಖೆ ತಿಳುವಳಿಕೆ ನೀಡದಿದ್ದರೇ, ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಲೋಜಿರಾವ್ ಅಷ್ಟೇಕರ, ಪ್ರಕಾಶ್ ಮರಗಾಳೆ, ಆರ್.ಎಂ. ಚೌಗುಲೆ, ವಿಲಾಸ್ ಘಾಡಿ, ವಿಜಯ್ ಪಾಟೀಲ್, ಎಂ.ಆರ್. ಬಿರ್ಜೆ, ಆರ್.ಸಿ. ಮೋದಗೆಕರ, ಎಲ್.ಜಿ. ಪಾಟೀಲ್, ಆರ್.ಎಂ. ಪಾಟೀಲ್. ವಿಕಾಸ್ ಕಲಘಟಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.