ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಮಹದಾಯಿ ವಿಷಯ ಕುರಿತು ಚರ್ಚಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಮಹತ್ವದ ಸಭೆಯನ್ನು ವಿಧಾನಪರಿಷತ್ ಮಾಜಿ ಸದಸ್ಯ ಬಸವರಾಜ ಹೊರಟ್ಟಿ ಸಂಘಟಿಸಿದ್ದಾರೆ.
ಜನೆವರಿ 5ರಂದು ಹುಬ್ಭಳ್ಳಿ ಪ್ರವಾಸಿ ಮಂದಿರದಲ್ಲಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ವಿಜಯಪುರದ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಆಹ್ವಾನಿಸಿದ್ದಾರೆ.
ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಗಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ದಿನಗಳಿಂದ ನಿರಂತರವಾದ ಹೋರಾಟ ನಡೆದಿದ್ದು, ಹೋರಾಟ ಮುಂದುವರೆದಿದೆ. ಮಹದಾಯಿ ನ್ಯಾಯಾಧೀಕರಣ ದಿನಾಂಕ : ೧೪-೦೮-೨೦೧೮ ರಂದು ಐತೀರ್ಪು ನೀಡಿ ಕರ್ನಾಟಕಕ್ಕೆ ಕೇವಲ ೧೩.೫ ಟಿಎಂಸಿ ನೀರು ಹಂಚಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮತ್ತು ದಿನಾಂಕ : ೨೨-೧೨-೨೦೧೯ ರಂದು ಹುಬ್ಬಳ್ಳಿಯಲ್ಲಿ ಸೇರಿದ ಎಲ್ಲಾ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು, ರೈತ, ಕಾರ್ಮಿಕ, ಕನ್ನಡಪರ ಮತ್ತು ಇತರೆ ಸಂಘಟನೆಗಳ ಮುಖಂಡರ ಸಭೆ ಈ ವಿಷಯ ಕುರಿತು ಸಾಧಕ ಬಾಧಕಗಳ ಕುರಿತು ಸಮಗ್ರವಾಗಿ ಚರ್ಚಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮುಂದಿನ ಕ್ರಮಗಳ ಬಗ್ಗೆ ಮನವರಿಕೆ ಮಾಡಲು ಅನುವಾಗಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕೇಂದ್ರ ಸರಕಾರದ ಸಚಿವರು, ರಾಜ್ಯ ಸರಕಾರದ ಸಚಿವರು, ಸಂಸದರು, ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್) ಸದಸ್ಯರನ್ನೊಳಗೊಂಡ ಜನಪ್ರತಿನಿಧಿಗಳ ಸಭೆಯನ್ನು ನಡೆಸಬೇಕೆಂದು ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ನನಗೆ ಹಿರಿಯ ಶಾಸಕರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನನಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಭೆಯ ಒಟ್ಟಾಭಿಪ್ರಾಯವನ್ನು ಒಪ್ಪಿಕೊಂಡು ಈ ಸಭೆಯನ್ನು ದಿನಾಂಕ : ೦೫-೦೧-೨೦೨೦ ರವಿವಾರ ಬೆಳಿಗ್ಗೆ : ೧೧-೦೦ ಗಂಟೆಗೆ ಹುಬ್ಬಳ್ಳಿ ಸರ್ಕಿಟ್‌ಹೌಸನಲ್ಲಿ ಸಭೆಯನ್ನು ನಿಗದಿಮಾಡಲಾಗಿದೆ ಎಂದು ಹೊರಟ್ಟಿ ಜನಪ್ರತಿನಿಧಿಗಳಿಗೆ ಬರೆದಿರುವ ಆಹ್ವಾನ ಪತ್ರದಲ್ಲಿ ತಿಳಿಸಿದ್ದಾರೆ.
ನನೆಗುದಿಗೆ ಬಿದ್ದಿರುವ ಈ ಭಾಗದ ಜನತೆಯ ಬಹುದಿಗಳ ಕನಸಾಗಿರುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಶೀಘ್ರ ಅನುಷ್ಠನಕ್ಕಾಗಿ ಈ ಸಭೆಯಲ್ಲಿ, ಇರುವ ಅವಕಾಶಗಳನ್ನು ಬಳಸಿಕೊಂಡು ಸರ್ವಸಮ್ಮತವಾದ ಒಮ್ಮತ ಅಭಿಪ್ರಾಯಕ್ಕೆ ಬರಲು ತಮ್ಮ ಘನ ಉಪಸ್ಥಿತಿ ಹಾಗೂ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳು ತುಂಬಾ ಅಗತ್ಯವಾಗಿದ್ದು ನಮ್ಮ ಆಹ್ವಾನಕ್ಕೆ ಮನ್ನಣೆ ನೀಡಿ ಜನಪ್ರತಿನಿಧಿಗಳಾದ ತಾವು ಸಭೆಗೆ ಆಗಮಿಸಬೇಕು ಎಂದು ಕೋರಿದ್ದಾರೆ.
ಸಭೆಗೆ ಆಹ್ವಾನಿತರ ವಿವರ –
ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು
೧. ಪ್ರಭಾಕರ ಕೋರೆಯವರು, ಮಾನ್ಯ ಸಂಸದರು, ಸಂಸತ್‌ಭವನ, ನವದೆಹಲಿ/ ಬೆಳಗಾವಿ.
೨. ಸುರೇಶ ಅಂಗಡಿಯವರು, ಮಾನ್ಯ ಸಚಿವರು, ರೈಲ್ವೆ ರಾಜ್ಯಖಾತೆ, ಸಂಸತ್‌ಭವನ, ನವದೆಹಲಿ/ ಬೆಳಗಾವಿ
೩. ಪ್ರಲ್ಹಾದ ಜೋಷಿಯವರು, ಮಾನ್ಯ ಸಂಸದೀಯ ವ್ಯವಹಾರಗಳ ಸಚಿವರು, ಸಂಸತ್‌ಭವನ, ನವದೆಹಲಿ/ಹುಬ್ಬಳ್ಳಿ
೪. ಶಿವಕುಮಾರ ಉದಾಸಿಯವರು, ಮಾನ್ಯ ಸಂಸದರು, ಸಂಸತ್‌ಭವನ, ನವದೆಹಲಿ/ ಹಾವೇರಿ.
೫. ಪಿ.ಸಿ. ಗದ್ದಿಗೌಡರು, ಮಾನ್ಯ ಸಂಸದರು, ಸಂಸತ್‌ಭವನ, ನವದೆಹಲಿ/ ಬಾಗಲಕೋಟೆ
೬. ಅನಂತಕುಮಾರ ಹೆಗಡೆಯವರು, ಮಾನ್ಯ ಸಂಸದರು, ಸಂಸತ್‌ಭವನ, ನವದೆಹಲಿ/ ಕಾರವಾರ.
ವಿಧಾನ ಸಭಾ ಸದಸ್ಯರು
೧. ಅಂಜಲಿ ನಿಂಬಾಳಕರ, ಶಾಸಕರು, ಖಾನಾಪುರ
೨. ಕುಸುಮಾವತಿ ಶಿವಳ್ಳಿ, ಕುಂದಗೋಳ
೩. ದೊಡ್ಡಗೌಡ್ರ ಮಹಾಂತೇಶ, ಶಾಸಕರು, ಕಿತ್ತೂರು
೪. ಮಹಾಂತೇಶ ಕೌಜಲಗಿ, ಬೈಲಹೊಂಗಲ
೫. ಶ್ರೀ ಆನಂದ ಮಾಮನಿ, ಸವದತ್ತಿ
೬. ಮಹಾದೇವಪ್ಪ ಯಾದವಾಡ, ರಾಮದುರ್ಗ
೭. ಸಿದ್ಧರಾಮಯ್ಯ, ಬದಾಮಿ
೮. ಕಳಕಪ್ಪ ಬಂಡಿ, ರೋಣ
೯. ಸಿ.ಸಿ. ಪಾಟೀಲ, ಸಚಿವರು, ನರಗುಂದ
೧೦. ಎಚ್.ಕೆ. ಪಾಟೀಲ, ಗದಗ
೧೧. ಜಗದೀಶ ಶೆಟ್ಟರ್, ಸಚಿವರು, ಹು-ಧಾ ಸೆಂಟ್ರಲ್
೧೨. ಪ್ರಸಾದ ಅಬ್ಬಯ್ಯ, ಹು-ಧಾ ಪೂರ್ವ
೧೩. ಅರವಿಂದ ಬೆಲ್ಲದ, ಹು-ಧಾ ಪಶ್ಚಿಮ
೧೪. ಅಮೃತ ದೇಸಾಯಿ, ಧಾರವಾಡ ಗ್ರಾಮೀಣ
ವಿಧಾನ ಪರಿಷತ್ ಸದಸ್ಯರು
೧. ಬಸವರಾಜ ಹೊರಟ್ಟಿ
೨. ಪ್ರದೀಪ ಶೆಟ್ಟರ
೩. ಶ್ರೀನಿವಾಸ ಮಾನೆ
೪. ಎಸ್.ವಿ. ಸಂಕನೂರ
೫. ಅರುಣ ಶಹಾಪೂರ
೬. ಹನುಮಂತ ನಿರಾಣಿ
೭. ಎಸ್.ಎಲ್. ಘೋಟ್ನೇಕರ
೮. ರಾಮಪ್ಪ ತಿಮ್ಮಾಪೂರ
೯. ವಿವೇಕರಾವ ವಸಂತರಾವ ಪಾಟೀಲ
೧೦. ಸುಧೀರಗೌಡ ಪಾಟೀಲ
೧೧. ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ