Kannada NewsKarnataka News

ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕ ಅನಿಲ ಬೆನಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿಧಿಯಡಿಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಪಾಟೀಲ ಗಲ್ಲಿಯಲ್ಲಿನ ಮರಾಠಿ ಶಾಲೆ ನಂ.೩ ರ ಶಾಲಾ ಕಟ್ಟಡ ನಿಮಾಣ ಕಾಮಗಾರಿ ಭೂಮಿ ಪೂಜೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ  ಮಾತನಾಡಿದ ಶಾಸಕರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿಯಿಂದ ಈಗಾಗಲೇ ಹಲವಾರು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದರು.

ಶಾಸಕರ ನಿಧಿಯಡಿ ಪಾಟೀಲ ಗಲ್ಲಿಯಲ್ಲಿನ ಮರಾಠಿ ಶಾಲೆ ನಂ.೩ ರ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶೀಘ್ರವಾಗಿ ಕಟ್ಟಡ ಕಾಮಗಾರಿಯನ್ನು ಯಾವುದೇ ಲೋಪಗಳಿಲ್ಲದೆ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಡಿಗೇರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಖಾನಾಪೂರೆ, ಸಹಾಯಕ ಅಭಿಯಂತರ ವಂದಾಳೆ, ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಿಬ್ಬಂದಿ ವರ್ಗ, ಧನಂಜಯ ಜಾಧವ, ವಿಜಯ ಭದ್ರಾ  ಉಪಸ್ಥಿತರಿದ್ದರು.

Related Articles

Back to top button