Kannada NewsKarnataka News

ಸಚಿವ ಪ್ರಭು ಚವ್ಹಾಣ್ ಬೆಳಗಾವಿಗೆ…. ಪಾಲಿಕೆಯ ಅನುಮತಿ ಕಡ್ಡಾಯ ಇತ್ಯಾದಿ ಇತ್ಯಾದಿ

ಜು.೬ ರಂದು ಸಚಿವ ಪ್ರಭು ಚವ್ಹಾಣ್ ಅವರ ಜಿಲ್ಲಾ ಪ್ರವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- : ಪಶುಸಂಗೋಪನೆ, ಹಜ್ ಮತ್ತು ವಕ್ಷ್ ಸಚಿವರಾದ ಪ್ರಭು ಚವ್ಹಾಣ್ ಅವರು ಸೋಮವಾರ(ಜು.೬) ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೋಮವಾರ (ಜು.೬) ಬೆಳಗ್ಗೆ ೯ ಗಂಟೆಗೆ ಅಥಣಿಯ ಪಶು ವ್ಯದ್ಯಕಿಯ ಕಾಲೇಜಿನ ಪ್ರಗತಿ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ರಸ್ತೆ ಮೂಲಕ ಬೆಳಗಾವಿಗೆ ಆಗಮಿಸಿ ೧೨.೩೦ಕ್ಕೆ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ ೧ ಗಂಟೆಗೆ ನಗರದ ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಪಶುಸಂಗೋಪನಾ ಇಲಾಖೆ, ಹಜ್ ಮತ್ತು ವಕ್ಷ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಮಧ್ಯಾಹ್ನ ೨.೪೫ಕ್ಕೆ ನಗರದ ಹಾಲು ಒಕ್ಕೂಟ ಮಂಡಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಜೆ ೫.೩೦ಕ್ಕೆ ರಸ್ತೆ ಮೂಲಕ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೦-೨೧ ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನಾಂಕ ಹಾಗೂ ಸೆಪ್ಟೆಂಬರ್ ೧೫ ರವರೆಗೆ ದಂಡ ಶುಲ್ಕ ರೂ. ೫೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. ರೂ.೨೫ ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ ಜುಲೈ ೧ ರಿಂದ ಪಡೆಯಬಹುದು.
ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣದ  ಮೂಲಕ ಸಹ ಪಡೆದುಕೊಳ್ಳಬಹುದು. ಇವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂ.೨೫ ಪ್ರತ್ಯೇಕವಾಗಿ ಪಾವತಿಸುವುದು.
ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮, ದೂರವಾಣಿ ಸಂಖ್ಯೆ ೦೮೦-೨೬೬೨೩೫೮೪ ಇವರನ್ನು ಸಂಪರ್ಕಿಸಬಹುದು ಎಂದು ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಅತಗುಂದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮುಕ್ತ ಶಾಲೆ(ಕೆ.ಒ.ಎಸ್) ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಮುಕ್ತ ಶಾಲೆ(ಕೆ.ಒ.ಎಸ್)ಯ ಪರೀಕ್ಷೆಗಳನ್ನು ಜುಲೈ ೬ ರಿಂದ ೧೫ ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕ.ಪ್ರೌ.ಶಿ.ಪ.ಮಂ. ನಿರ್ದೇಶಕರ ಆದೇಶದ ಮೇರೆಗೆ ಪರೀಕ್ಷೆಯನ್ನು ಮುಂದೂಡಲಾಗಿದೆ.
ಪರೀಕ್ಷೆಗಳನ್ನು ನಡೆಸುವ ದಿನಾಂಕ ಹಾಗೂ ಸಮಯವನ್ನು ನಂತರ ತಿಳಿಸಲಾಗುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜುಲೈ ೪ರ ಮಧ್ಯಾಹ್ನ ೩ಘಂಟೆಯಿಂದ ಜುಲೈ ೫ರ ಸಾಯಂಕಾಲ ೭ ಘಂಟೆಯವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
೧೧೦ ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ನಾವಗೆ ಔದ್ಯೋಗಿಕ ಕ್ಷೇತ್ರ, ವಾಘವಾಡೆ ಔದ್ಯೋಗಿಕ ಕ್ಷೇತ್ರ ಹಾಗೂ ಮಚ್ಛೆ ಔದ್ಯೋಗಿಕ ಕ್ಷೇತ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಅನುಮತಿ ಕಡ್ಡಾಯ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ದೇವಸ್ಥಾನ ಅಥವಾ ಮಂಗಲ ಕಾರ್ಯಾಲಯದಲ್ಲಿ ಅನುಮತಿ ಇಲ್ಲದೇ ಯಾವುದೇ ಸಭೆ/ಸಮಾರಂಭಗಳು ಅಥವಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಮಹಾನಗರ ಪಾಳಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುಮತಿ ಇಲ್ಲದೇ ಸಭೆ/ಸಮಾರಂಭ ಅಥವಾ ಯಾವುದೇ ಕಾರ್ಯಕ್ರಮ ನಡೆಸಿದಲ್ಲಿ ಅದಕ್ಕೆ ಸಂಬಂಧಪಟ್ಟ ದೇವಸ್ಥಾನ ಟ್ರಸ್ಟಿಗಳು ಹಾಗೂ ಮಂಗಲ ಕಾರ್ಯಾಲಯಗಳ ಮಾಲಕರೇ ಜವಾಬ್ದಾರರಾಗಿರುತ್ತಾರೆ.
ಕೋವಿಡ್-೧೯ ನಿಯಮಗಳಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಹಾಗೂ ದಿ ಕರ್ನಾಟಕ ಎಪಿಡೆಮಿಕ್ ಡಿಸೀಸ್, ಕೋವಿಡ್-೧೯ ರೆಗ್ಯೂಲೇಶನ್ ೨೦೨೦ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕಯ ಆಯುಕ್ತ ಜಗದೀಶ್ ಕೆ.ಎಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಅಹ್ವಾನ

ಕರ್ನಾಟಕರಾಜ್ಯ ಸಫಾಯಿಕರ್ಮಚಾರಿ ಅಭಿವೃಧ್ಧಿ ನಿಗಮದ ವತಿಯಿಂದ ೨೦೧೯-೨೦ ನೇ ಸಾಲಿಗೆ ೨೧ ರಿಂದ ೬೦ ವರ್ಷದೊಳಗಿನ ಅರ್ಹ ಸಫಾಯಿಕರ್ಮಚಾರಿ/ಮ್ಯಾನ್ಯೂಯಲ್ ಸ್ಕ್ಯಾವೇಂಜರ‍್ಸ್ ಮತ್ತು ಅವರ ಅವಲಂಬಿತರರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಜೂನ ೩೦ ರೊಳಗಾಗಿ ನಿಗಮದ ವೆಬ್‌ಸೈಟ್ hಣಣಠಿ://ತಿತಿತಿ.ಞssಞಜಛಿ.ಞಚಿಡಿ.ಟಿiಛಿ.iಟಿ ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಿಳಿಸಿದ್ದು, ಅರ್ಜಿಸಲ್ಲಿಸುವ ದಿನಾಂಕವನ್ನು ಜುಲೈ ೩೧ ರವರೆಗೆ ವಿಸ್ತರಣೆ ಮಾಡಲಾಗಿದೆ.
ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಕ್ಕೆ ಭೇಟಿ ನೀಡಿ ಪಡೆಯಬಹುದಾಗಿರುತ್ತದೆ. ಅರ್ಜಿ ಸಲ್ಲಿಸಿರುವ ಬಗ್ಗೆ ಅರ್ಜಿ ಪ್ರತಿ ಹಾಗೂ ಸ್ವೀಕೃತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ಧಿ ನಿಗಮ, ಮೆಟಗುಡ್ ಬಿಲ್ಡಿಂಗ್, ಮಹಾಂತೇಶನಗರ, ಬೆಳಗಾವಿ-೫೯೦೦೧೬ ವಿಳಾಸದಲ್ಲಿ ಸಲ್ಲಿಸಲು ಡಾ. ಬಿ.ಆರ್.ಅಂಬೇಡ್ಕರ್ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಸಹಾಯವಾಣಿ ಪ್ರಾರಂಭ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ವತಿಯಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ದೂರು ದಾಖಲಿಸಲು ಆಯೋಗದಲ್ಲಿ ಸಹಾಯವಾಣಿ ಸ್ಥಾಪಿಸಿದ್ದು, ಸಂಕಷ್ಟದೊಳಗೆ ಸಿಲುಕಿರುವ ಮಕ್ಕಳು ಅಥವಾ ಅಂತಹ ಮಕ್ಕಳ ಮಾಹಿತಿ ಹೊಂದಿರುವ ವ್ಯಕ್ತಿಗಳು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.
ದೂರವಾಣಿ ಸಂಖ್ಯೆ ೦೮೦-೪೭೧೮೧೧೭೭ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ಈ ಸಹಾಯವಾಣಿ ಸೋಮವಾರ ದಿಂದ ಶನಿವಾರದವರೆಗೆ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೂ ಕಾರ್ಯನಿರ್ವಹಿಸಲಿದ್ದು, ಬಾಲ್ಯ ವಿವಾಹ, ಬಾಲಕಾರ್ಮಿಕ, ಮಕ್ಕಳ ಕಾಣೆಯಾಗುವುದು, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ, ಮಕ್ಕಳ ಸಾಗಾಣಿಕೆ, ಮಾರಾಟ, ಅತ್ಯಾಚಾರ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಕರೆ ಮಾಡಿ ದೂರು ದಾಖಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್: ಭಾನುವಾರ ಕೃಷಿ ಮಾರುಕಟ್ಟೆ ಬಂದ್

ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರವು ಪ್ರತಿ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್ ಘೋಷಿಸಿ, ಪ್ರತಿ ರವಿವಾರ ಸೆಕ್ಷನ್ ೧೪೪ ಜಾರಿ ಮಾಡಿರುವುದರಿಂದ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ರವಿವಾರದಂದು ವ್ಯಾಪಾರ ವಹಿವಾಟನ್ನು ಬಂದ ಮಾಡಲಾಗಿರುತ್ತದೆ.
ಸದರಿ ದಿನದ ಬದಲಾಗಿ ಸೋಮವಾರದಂದು ವ್ಯಾಪಾರ ವಹಿವಾಟನ್ನು ನಡೆಸಲು ಮತ್ತು ತರಕಾರಿ ಮಾರುಕಟ್ಟೆಗೆ ಪ್ರತಿ ದಿನ ಆವಕ ಮಾಡಿಕೊಳ್ಳುವ ಸಮಯವನ್ನು ಮುಂಜಾನೆ ೫ ಗಂಟೆಯಿಂದ ಮಧ್ಯಾಹ್ನ ೧ ಗಂಟೆಗೆ ನಿಗದಿಪಡಿಸಲಾಗಿರುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button